HEALTH TIPS

ಪಿಎಂಎಂವೈ ತರುಣ್‌ ಪ್ಲಸ್‌ ವಿಭಾಗ | 25 ಸಾವಿರ ಫಲಾನುಭವಿಗಳು: ಎಂ.ನಾಗರಾಜು

ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯ (ಪಿಎಂಎಂವೈ) ತರುಣ್ ಪ್ಲಸ್ ವಿಭಾಗದ ಅಡಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 25 ಸಾವಿರ ಜನರು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ₹20 ಲಕ್ಷದವರೆಗೆ ಸಾಲ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ.ನಾಗರಾಜು ಸೋಮವಾರ ಹೇಳಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಮಂಡಿಸಿದ್ದ 2024-25ನೇ ಸಾಲಿನ ಬಜೆಟ್‌ನಲ್ಲಿ ತರುಣ್‌ ಪ್ಲಸ್‌ ಅಡಿಯಲ್ಲಿನ ಸಾಲದ ಮಿತಿಯನ್ನು ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಪ್ರಸ್ತಾಪಿಸಿದ್ದರು. ಅಕ್ಟೋಬರ್ 25ರಂದು ಇದು ಜಾರಿಗೆ ಬಂದಿತ್ತು.

ನಾಲ್ಕು ತಿಂಗಳಲ್ಲಿ 24,557 ಹೊಸ ಸಾಲಗಾರರು ತರುಣ್ ಪ್ಲಸ್ ವರ್ಗದ ಅಡಿಯಲ್ಲಿ ಸಾಲವನ್ನು ಪಡೆದಿದ್ದು, ಇದರ ಮೊತ್ತ ₹3,790 ಕೋಟಿಗಳಷ್ಟಾಗಿದೆ.

2015ರ ಏಪ್ರಿಲ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು. ಇಲ್ಲಿಯವರೆಗೆ ₹33.65 ಲಕ್ಷ ಕೋಟಿ ಮೊತ್ತದ ಸಾಲ ಮಂಜೂರು ಮಾಡಲಾಗಿದೆ. ಈ ಪೈಕಿ ಶೇ 20ರಷ್ಟು ಸಾಲವನ್ನು ಹೊಸ ಉದ್ಯಮಿಗಳಿಗೆ ನೀಡಲಾಗಿದೆ. ಶೇ 68ರಷ್ಟು ಸಾಲವನ್ನು ಮಹಿಳಾ ಉದ್ಯಮಿಗಳಿಗೆ ಮತ್ತು ಶೇ 50ರಷ್ಟು ಸಾಲವನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ನೀಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಯಾವುದೇ, ಆಧಾರ ಇಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದವರಿಗಷ್ಟೇ ಈ ಸಾಲ ಸೌಲಭ್ಯ ಸಿಗಲಿದೆ. ಶಿಶು (₹50 ಸಾವಿರದವರೆಗೆ), ಕಿಶೋರ್‌ (₹50 ಸಾವಿರದಿಂದ ₹5 ಲಕ್ಷ) ಹಾಗೂ ತರುಣ್‌ (₹20 ಲಕ್ಷ) ವಿಭಾಗದಲ್ಲಿ ಸಾಲ ನೀಡಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries