ನವದೆಹಲಿ: ಬಾಹ್ಯಾಕಾಶದಲ್ಲಿ 2 ಉಪಗ್ರಹಗಳನ್ನು ಜೋಡಿಸುವ ಇಸ್ರೋನ ಸ್ಪೇಸ್ ಡಾಕಿಂಗ್ ಪ್ರಯೋಗ (ಸ್ಪೇಡೆಕ್ಸ್)ದ ಭಾಗವಾಗಿ ಉಪಗ್ರಹಗಳನ್ನು 2ನೇ ಬಾರಿ ಯಶಸ್ವಿಯಾಗಿ ಜೋಡಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಸೋಮವಾರ ತಿಳಿಸಿದ್ದಾರೆ.
2024ರ ಡಿ.30ರಂದು ಎಸ್‌ಡಿಎಕ್ಸ್01 ಮತ್ತು ಎಸ್‌ಡಿಎಕ್ಸ್02 ಎಂಬ ಉಪಗ್ರಹಗಳನ್ನು ಕಕ್ಷೆಯಲ್ಲಿ ಸ್ಥಾಪಿಸುವ ಮೂಲಕ ಈ ಪ್ರಯೋಗ ಆರಂಭವಾಗಿತ್ತು.
2025ರ ಜ.16ರಂದು ಈ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲೇ ಜೋಡಿಸಲಾಗಿತ್ತು (ಡಾಕಿಂಗ್). ಮಾ.13ರಂದು ಬೇರ್ಪಡಿಸಲಾಗಿತ್ತು (ಅನ್‌ಡಾಕಿಂಗ್). ಈಗ ಮತ್ತೂಮ್ಮೆ ಉಪಗ್ರಹಗಳನ್ನು ಡಾಕಿಂಗ್ ಮಾಡಲಾಗಿದೆ. ಮುಂದಿನ 2 ವಾರಗಳಲ್ಲಿ ಈ ಕುರಿತ ಇನ್ನಷ್ಟು ಪ್ರಯೋಗಗಳು ನಡೆಯಲಿವೆ.




