ಬದಿಯಡ್ಕ: ಕರಿಂಬಿಲ ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ವಾರ್ಷಿಕೋತ್ಸವವು ಏ.4 ಶುಕ್ರವಾರ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಅತ್ತಾಳಪೂಜೆ, ಗಣಪತಿ ಪೂಜೆ ನಡೆಯಲಿದೆ. ಏ.4 ಶುಕ್ರವಾರ ಪೂರ್ವಾಹ್ನ ಗಣಪತಿ ಹೋಮ, ಶಂಕರನಾರಾಯಣ ಹವನ, ಶತರುದ್ರಾಬಿಷೇಕ, ನವಕಾಭಿಷೇಕ, 10 ಗಂಟೆಯಿಂದ ಯಕ್ಷವಿಹಾರಿ ಬದಿಯಡ್ಕ ಇವರಿಂದ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.40ಕ್ಕೇ ದೀಪಾರಾಧನೆ, 8 ಗಂಟೆಗೆ ಕಾರ್ತಿಕ ಪೂಜೆ, ಶನಿವಾರ ಪ್ರಾತಃಕಾಲ 5ರಿಂದ ಶ್ರೀ ಧೂಮಾವತಿ ಹಾಗೂ ಪರಿವಾರದ ದೈವಗಳ ಕೋಲ ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




