ಪೇಶಾವರ: ಪಾಕಿಸ್ತಾನದ ವಿವಾದಿತ ಖೈಬರ್ ಪಖ್ತುಂಕ್ವಾ ಪ್ರದೇಶದಲ್ಲಿರುವ ಶಾಂತಿ ಸಮಿತಿ ಕಚೇರಿ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಮಿತಿಯ ಮುಖ್ಯಸ್ಥ ಸೈಫುರ್ ರೆಹಮಾನ್ ಮಂಗಳವಾರ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ದಕ್ಷಿಣ ವಜಿರಿಸ್ತಾನದ ಕಚೇರಿ ಮೇಲೆ ನಡೆದ ಕಚ್ಚಾ ಬಾಂಬ್ ದಾಳಿಯಲ್ಲಿ 8 ಜನರು ಸಾವಿಗೀಡಾಗಿದ್ದರು. 30 ಮಂದಿಗೆ ಗಾಯಗಳಾಗಿದ್ದವು.
ಮತ್ತೊಂದೆಡೆ, ಬಜೌರ್ ಮತ್ತು ಮೊಹ್ಮದ್ ಜಿಲ್ಲೆಗಳಲ್ಲಿ ಬಂದೂಕುಧಾರಿಗಳು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ನಿಷೇಧಿತ ತೆಹ್ರಿಕ್-ಎ-ತಾಲಿಬಾನ್ ಸಂಘಟನೆಯೊಂದಿಗೆ(ಟಿಟಿಪಿ) 2022ರಲ್ಲಿ ಮಾಡಿಕೊಂಡಿದ್ದ ಕದನ ವಿರಾಮ ಇತ್ತೀಚೆಗೆ ಉಲ್ಲಂಘನೆಯಾದ ಪರಿಣಾಮ ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿವೆ.

