HEALTH TIPS

ಕೇರಳದ ಜನತೆಗೆ ಬಿಜೆಪಿ ಏಕೈಕ ಆಶಾಕಿರಣ-ವಿಕಸಿತ ಕೇರಳ ಸಮಾವೇಶ ಉದ್ಘಾಟಿಸಿ ರಾಜೀವ್‍ಚಂದ್ರಶೇಖರ್ ಅಭಿಪ್ರಾಯ

ಕಾಸರಗೋಡು: ಬಿಜೆಪಿಯ 'ವಿಕಸಿತ ಕೇರಳ' ಸಮಾವೇಶಕ್ಕೆ ಕಾಸರಗೋಡಿನಲ್ಲಿ ಮಂಗಳವಾರ ಅದ್ದೂರಿಯ ಚಾಲನೆ ನೀಡಲಾಯಿತು. ಆರ್.ಕೆ ಮಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್‍ಚಂದ್ರಶೇಖರ್ ಉದ್ಘಾಟಿಸಿ ಮಾತನಾಡಿ, ಉಭಯ ರಂಗಗಳ ಆಡಳಿತ ಕೇರಳವನ್ನು ಇಂದು ಅಭಿವೃದ್ಧಿಯಿಂದ ವಂಚಿತವನ್ನಾಗಿಸಿದೆ. ಅಭಿವೃದ್ಧಿಯ ಭರವಸೆಯೊಂದಿಗೆ ಅಧಿಕಾರಕ್ಕೇರಿದ್ದ ಎಡರಂಗ ಸರ್ಕಾರ ಇಂದು ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು, ಸುಳ್ಳು ಭರವಸೆಗಳ ಮೂಲಕ ರಾಜ್ಯದ ಜನತೆಯನ್ನು ವಂಚಿಸಿದೆ. ರಾಜ್ಯದ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್‍ಗೂ ಕಿಂಚಿತ್ತೂ ಕಾಳಜಿಯಿಲ್ಲದಾಗಿದೆ.  ಎಡರಂಗದ ಆಡಳಿತ ವೈಫಲ್ಯದ ಬಗ್ಗೆ ಧ್ವನಿಯೆತ್ತಬೇಕಾದ ಕಾಂಗ್ರೆಸ್ ನೇತೃತ್ವದ ಐಕ್ಯರಂಗದ ಮೌನ ರಾಜ್ಯವನ್ನು ಮತ್ತಷ್ಟು ಅಧೋಗತಿಗೆ ತಳ್ಳಿದೆ. ರಾಜ್ಯದ ಜನತೆಗೆ ಬಿಜೆಪಿ ಏಕೈಕ ಆಶಾಕಿರಣವಾಗಿದ್ದು, ವಿಕಸಿತ ಕೇರಳದ ಧ್ಯೇಯದೊಂದಿಗೆ ಬಿಜೆಪಿ ಹೋರಾಟ ನಡೆಸಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ರಾಜಕೀಯದಲ್ಲಿ ಬಿಜೆಪಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಿಳಿಸಿದರು.


ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅದ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್,  ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎ.ಪಿ ಅಬ್ದುಲ್ಲ ಕುಟ್ಟಿ, ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್, ರಾಜ್ಯ ಮಾಧ್ಯಮ ಪ್ರಭಾರಿ ಅನೂಪ್ ಆ್ಯಂಟನಿ, ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ,  ಮಾಝಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಸಮಿತಿ ಸದಸ್ಯರಾದ ವಕೀಲ ಎಂ. ನಾರಾಯಣ ಭಟ್, ವಿ. ರವೀಂದ್ರನ್, ವಿ. ಬಾಲಕೃಷ್ಣ ಶೆಟ್ಟಿ, ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ರಂಜಿತ್, ಎ. ವೇಲಾಯುಧನ್, ಸವಿತಾ ಟೀಚರ್, ಸತೀಶ್ಚಂದ್ರ ಭಂಡಾರಿ, ಕರುಣಾಕರನ್ ಮಾಸ್ಟರ್, ಕೆ.ಕೆ ನಾರಾಯಣನ್, ಎಂ. ಬಾಲರಾಜ್, ಎಂ. ಜನನಿ, ಎ.ಕೆ ಕಯ್ಯಾರ್, ಮಣಿಕಂಠ ರೈ, ಮುರಳೀಧರ ಯಾದವ್, ಎಚ್.ಆರ್. ಸುಕನ್ಯಾ, ಎಂ. ಬಾಭುರಾಜ್, ಮನುಲಾಲ್ ಮೇಲತ್, ವೀಣಾ ಅರುಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಕಾಸರಗೋಡಿಗೆ ಭೇಟಿ ನಿಡಿದ ರಾಜೀವ್ ಚಂದ್ರಶೇಖರ್ ಅವರಿಗೆ ಸೋಮವಾರ ತಡರಾತ್ರಿ ಅದ್ದೂರಿಯ ಸ್ವಾಗತ ನೀಡಲಾಯಿತು. 

ಕಾರ್ಯಕ್ರಮಕ್ಕೆ ಮೊದಲು ಕಾಸರಗೋಡು ಸಿಟಿ ಟವರ್‍ನಲ್ಲಿ ಕ್ಷೇತ್ರ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿದ್ದ ಕೋರ್ ಕಮಿಟಿ ಸಭೆಯಲ್ಲಿ ರಾಜೀವ್‍ಚಂದ್ರಶೇಕರ್ ಪಾಲ್ಗೊಮಡರು.  ನಂತರ ರಾಜ್ಯಾಧ್ಯಕ್ಷ ರಾಜೀವ್‍ಚಂದ್ರಶೇಖರ್ ಅವರನ್ನು ಹೊಸ ಬಸ್ ನಿಲ್ದಾಣ ಪ್ರದೇಶದಿಂದ ವಿಕಸಿತ ಕೇರಳ ಸಮಾವೇಶ ಆಯೋಜಿಸಿದ್ದ ಆರ್.ಕೆ ಮಾಲ್ ಸಭಾಂಗಣಕ್ಕೆ ಭವ್ಯ ಸ್ವಾಗತದೊಂದಿಗೆ ಕರೆತರಲಾಯಿತು. ಕಾರ್ಯಖ್ರಮದಲ್ಲಿ ಪಹಲ್ಗಾಮ್ ಭಯೋತ್ಪಾದಕ ದುರಂತದಲ್ಲಿ ಮಡಿದವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries