ಸಮರಸ ಚಿತ್ರಸುದ್ದಿ: ಕಾಸರಗೋಡು: ಬಿಜೆಪಿಯ 'ವಿಕಸಿತ ಕೇರಳ' ಸಮಾವೇಶದ ಉದ್ಘಾಟನೆಗೆ ಕಾಸರಗೋಡಿಗೆ ಅಗಮಿಸಿದ ಬಿಜೆಪಿ ನೂತನ ರಾಜ್ಯಾದ್ಯಕ್ಷ ರಾಜೀವ್‍ಚಂದ್ರಶೇಖರ್ ಅವರನ್ನು ಅದ್ದೂರಿ ಸವಗತದೊಂದಿಗೆ ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದಿಂದ ಸಮಾವೇಶ ನಡೆಯುವ ಆರ್.ಕೆ ಮಾಲ್ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್, ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ ಅಬ್ದುಲ್ಲ ಕುಟ್ಟಿ ಮೊದಲಾದವರು ಉಪಸ್ಥಿತರಿದ್ದರು.




