ಕಾಸರಗೋಡು: ಪ್ರೆಸ್‍ಕ್ಲಬ್ ಅತಿಥೇಯರಾಗಿರವ ರಾಜ್ಯಮಟ್ಟದ ಹಗ್ಗ ಜಗ್ಗಾಟ ಹಾಗೂ ಉತ್ತರ ವಲಯ ಮಟ್ಟದ ಹಗ್ಗಜಗ್ಗಾಟ ಸ್ಪರ್ದೆಯ ಸ್ವಾಗತ ಸಮಿತಿ ರನಾ ಸಭೆ ಕಾಸರಗೋಡು ಪ್ರೆಸ್ ಕ್ಲಬ್‍ನಲ್ಲಿ ಜರುಗಿತು.
ಶಾಸಕ ಎನ್.ಎ. ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅದ್ಯಕ್ಷ ಅಬ್ಬಾಸ್ ಬೀಗಂ, ಸ್ಪೋಟ್ರ್ಸ್ ಕೌನ್ಸಿಲ್ ಸದಸ್ಯೆ ಶೋಭಾ ಬಾಲನ್, ಹಗ್ಗ ಜಗ್ಗಾಟ ಅಸೋಸಿಯೇಶನ್ ಪ್ರತಿನಿಧಿ ಬಾಬು ಕೊಟ್ಟಪ್ಪಾರ, ಜಹೀರ್ ಆಸಿಫ್, ಹನೀಫಾ, ಕೆ.ಶ್ರೀಕಾಂತ್, ವಿ.ರಾಜನ್, ಬಿಜು ಉನ್ನಿಥಾನ್, ಅರ್ಜುನನ್ ತಾಯಲಂಗಡಿ ಮೊದಲದವರು ಉಪಸ್ಥಿತರಿದ್ದರು.
ಪ್ರದೀಪ್ ನಾರಾಯಣನ್ ಸ್ವಾಗತಿಸಿದರು ಮತ್ತು ಸುರೇಂದ್ರನ್ ಮಡಿಕೈ ವಂದಿಸಿದರು. ಈ ಸಂದರ್ಭ ಸ್ವಗತ ಸಮಿತಿ ಪದಾಧಿಕರಿಗಳನ್ನು ಆಯ್ಕೆ ಮಾಡಲಾಯಿತು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷ, ಪ್ರೆಸ್‍ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಉಪಾಧ್ಯಕ್ಷ ಹಾಗೂ ಪ್ರದೀಪ್ ನಾರಾಯಣನ್ ಅವರನ್ನು ಕನ್ವೀನರ್ ಅಗಿ ಆಯ್ಕೆ ಮಾಡಲಾಯಿತು. ಮೇ 21ರಂದು ಕಾಸರಗೋಡಿನಲ್ಲಿ ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ ನಡೆಯುವುದು.





