ಢಾಕಾ: ದೇಶದ್ರೋಹ ಎಸಗಿದ ಆರೋಪದಡಿ ಬಂಧಿತರಾಗಿದ್ದ ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್ ಬ್ರಹ್ಮಚಾರಿ ಅವರಿಗೆ ಬಾಂಗ್ಲಾದ ನ್ಯಾಯಾಲಯವು ಇಂದು (ಬುಧವಾರ) ಜಾಮೀನು ಮಂಜೂರು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅವರಿಗೆ ಜಾಮೀನು ನಿರಾಕರಿಸಿದ ಚಟ್ಟೋಗ್ರಾಮದ ನ್ಯಾಯಾಲಯವು, ಜೈಲಿಗೆ ಕಳುಹಿಸಿತ್ತು.
ಚಿನ್ಮಯಿ ಕೃಷ್ಣದಾಸ್ ಅವರ ಬಂಧನ ವಿರೋಧಿಸಿ ಪ್ರತಿಭಟನೆಗಳು ನಡೆದು, ಹಿಂಸಾಚಾರಕ್ಕೆ ತಿರುಗಿದ್ದವು. ವಕೀಲರೊಬ್ಬರ ಹತ್ಯೆಯ ನಂತರ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ತೆಳೆದಿತ್ತು
ರಾಜಕೀಯ ಪ್ರೇರಿತರಾಗಿ ಕೆಲವು ವಕೀಲರು ಧಮಕಿ ಹಾಕುತ್ತಿರುವುದರಿಂದ ಚಿನ್ಮಯಿ ಕೃಷ್ಣದಾಸ್ ಅವರ ಪರವಾಗಿ ವಾದ ಮಂಡಿಸಲು ಯಾವ ವಕೀಲರೂ ಮುಂದಾಗುತ್ತಿಲ್ಲ ಎಂದು 'ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋತ್'ನ ಸದಸ್ಯರಾದ ಸ್ವತಂತ್ರ ಗೌರಂಗ ದಾಸ್ ಹೇಳಿದ್ದರು.
ಚಿನ್ಮಯಿ ಕೃಷ್ಣದಾಸ್ ಪರವಾಗಿ ವಾದ ಮಂಡಿಸದೇ ಇರಲೆಂದೇ ಸುಮಾರು 70 ವಕೀಲರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು 'ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋತ್' ಆರೋಪಿಸಿರುವುದಾಗಿ 'ಎನ್ಡಿಟಿವಿ' ವರದಿ ಮಾಡಿತ್ತು.




