HEALTH TIPS

ಸಾರ್ವಜನಿಕ ವಲಯವನ್ನು ಬಲಪಡಿಸುವ ಪ್ರಯತ್ನಗಳು ಗುರಿ ಸಾಧಿಸಿವೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ: ಸಾರ್ವಜನಿಕ ವಲಯದ ಉದ್ಯಮಗಳಿಗೆ ಆದ್ಯತೆ ನೀಡುವ ಮೂಲಕ ಅವುಗಳನ್ನು ಬಲಪಡಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು ತಮ್ಮ ಗುರಿಯನ್ನು ಸಾಧಿಸಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಸರಿಯಾದ ಕ್ರಮಗಳು ಮತ್ತು ಅಗತ್ಯ ಕ್ರಮಗಳ ಮೂಲಕ, ಹಿಂದೆ ನಷ್ಟದಲ್ಲಿದ್ದ ಸಾರ್ವಜನಿಕ ವಲಯದ ಉದ್ಯಮಗಳು ಲಾಭದಾಯಕವಾಗಲು ಸಾಧ್ಯವಾಯಿತು. 1,000 ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಕಂಪನಿಗಳ ವರ್ಗಕ್ಕೆ ಪ್ರವೇಶಿಸಿರುವ ಕೆಲ್ಟ್ರಾನ್ ಮತ್ತು ಅನಂತ ಅಭಿವೃದ್ಧಿ ಸಾಮಥ್ರ್ಯವನ್ನು ಹೊಂದಿರುವ ಕೆಎಂಎಂಎಲ್ ಅತ್ಯುತ್ತಮ ಉದಾಹರಣೆಗಳಾಗಿವೆ. 


ಯೋಜನೆ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯು ಹೋಟೆಲ್ ಹಯಸಿಂತ್‍ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ವಲಯದ ಉದ್ಯಮಗಳ ಸಬಲೀಕರಣ ಕಾರ್ಯಾಗಾರದ ಸಮಾರೋಪ ಸಭೆಯನ್ನು ಮುಖ್ಯಮಂತ್ರಿ ಉದ್ಘಾಟಿಸುತ್ತಿದ್ದರು.

ಸಾರ್ವಜನಿಕ ವಲಯದ ಉದ್ಯಮಗಳನ್ನು ಸುಧಾರಿಸಲು ಸಂಸ್ಥೆಯ ಒಳಗಿನಿಂದಲೇ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರುಕಟ್ಟೆ ಮಾಡಬೇಕು. ಸಂಸ್ಥೆಯ ಎಲ್ಲಾ ಚಟುವಟಿಕೆಗಳಲ್ಲಿ ಪಾರದರ್ಶಕ ಮತ್ತು ಶುದ್ಧ ಕಾರ್ಯವಿಧಾನಗಳನ್ನು ಖಚಿತಪಡಿಸಿಕೊಳ್ಳಬೇಕು. ನೇಮಕಾತಿ ಪ್ರಕ್ರಿಯೆಗಳನ್ನು ಸಕಾಲದಲ್ಲಿ ಜಾರಿಗೊಳಿಸಬೇಕು. ಸಂಸ್ಥೆಗಳ ಮುಖ್ಯಸ್ಥರು ಆಂತರಿಕ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸಿಕೊಂಡು ತಮ್ಮ ಚಟುವಟಿಕೆಗಳಲ್ಲಿ ವೃತ್ತಿಪರತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಮುಂದುವರಿಯಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಕಾರ್ಯಾಗಾರದ ಭಾಗವಾಗಿ ಸರ್ಕಾರಕ್ಕೆ ಸಲ್ಲಿಸಲಾದ ಸಲಹೆಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries