ಕಾಸರಗೋಡು: ಜಮ್ಮುಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ದೇಶದ್ರೋಹದ ಹೇಳಿಕೆ ನೀಡಿರುವುದಗಿ ಹಿಂದೂ ಐಕ್ಯವೇದಿ ನೀಡಿದ ದಊರುನನ್ವಯ ಮುಸ್ಲಿಂ ಲೀಗ್ ಮುಖಂಡ ಬಶೀರ್ ವೆಳ್ಳಿಕೋತ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 173ರ ಪ್ರಕಾರ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಸಮಿತಿ ಅದ್ಯಕ್ಷ ಎಸ್.ಪಿ ಶಾಜಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಬಶೀರ್ ವೆಳ್ಳಿಕ್ಕೋತ್ ತನ್ನ ಫೇಸ್‍ಬುಕ್ ಪೋಸ್ಟ್‍ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನಿಗಳಲ್ಲವೆಂದೂ, ಸಂಘ ಪರಿವಾರ ಇದರ ಹಿಂದಿದೆ ಎಂಬುದಾಗಿ ಬರೆದಿರುವುದನ್ನು ಆಧಾರವಾಗಿಟ್ಟುಕೊಂಡು ಹಿಂದು ಐಕ್ಯವೇದಿ ದೂರು ಸಲ್ಲಿಸಿದೆ. ಹೇಳಿಕೆ ವಿವಾದವಾಗುತ್ತಿದ್ದಂತೆ ಬಶೀರ್ ವೆಳ್ಳಿಕ್ಕೋತ್ ತನ್ನ ಪೋಸ್ಟ್ ಹಿಂಪಡೆದಿದ್ದರು.





