ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಾಟ ನಡೆಸಿದ ಪ್ರಕರಣಕ್ಕೆ ಸಂಬಂದಿಸಿ ಇಬ್ಬರು ಅಪರಾಧಿಗಳಿಗೆ ತಲಾ ಎರಡು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20ಸಾವಿರ ರೂ. ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ)ದ ನ್ಯಾಯಾಧೀಶೆ ಪ್ರಿಯಾ ಕೆ. ತೀರ್ಪು ನೀಡಿದ್ದಾರೆ.
ಕಾಸರಗೋಡು ತಳಂಗರೆ ಬಾಂಗೋಡು ನಿವಾಸಿ ಬಿ.ಎ ಶಂಸುದ್ದೀನ್ ಹಾಗೂ ಕಾಞಂಗಾಡು ಸೌತ್ ಕೊವ್ವಲ್ ಹೌಸ್ ನಿವಾಸಿ ನೌಶಾದ್ ಎಂಬವರಿಗೆ ಈ ಶಿಕ್ಷೆ. ದಂಡ ಪವತಿಸದಿದ್ದಲ್ಲಿ ಅಪರಾಧಿಗಳು ಮೂರು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. 2020 ಅ. 12ರಂದು ನೀಲೇಶ್ವರ-ಪಳ್ಳಿಕೆರೆ ರೈಲ್ವೆ ಗೇಟು ಸನಿಹ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀಲೇಶ್ವರ ಪೊಲೀಸ್ ಠಾಣೆಯ ಅಂದಿನ ಇನ್ಸ್‍ಪೆಕ್ಟರ್ ಕೆ.ವಿ ಮಹೇಶ್ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಹತ್ತು ಕಿ.ಗ್ರಾಂ ಗಾಂಜಾ ವಶಪಡಿಸಿಕೊಂಡು ಕೇಸು ದಾಖಲಿಸಿಕೊಂಡಿದ್ದರು.




