ಕಾಸರಗೋಡು: ರೈಲಿಗೆ ಕಲ್ಲೆಸೆದ ಪ್ರಕರಣದ ಆರೋಪಿ, ಚಟ್ಟಂಚಾಲ್ ಸನಿಹದ ತೆಕ್ಕಿಲ್ ಮೈಲಾಟಿ ನಿವಾಸಿ ಎಸ್. ಅನಿಲ್‍ಕುಮಾರ್ ಎಂಬಾತನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು-ತಿರುವನಂತಪುರ ಮಧ್ಯೆ ಸಂಚರಿಸುವ ಮಲಬಾರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ಮಲಪ್ಪುರಂ ವಳಯಂಕೋಡ್ ನಿವಾಸಿ ಕೆ. ರಿಜಾಸ್ ಎಂಬವರು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ತಾನು ಮತ್ತು ಪತ್ನಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಅನಿಲ್‍ಕುಮಾರ್ ಪತ್ನಿ ಜತೆ ಅನುಚಿತವಾಗಿ ವರ್ತಿಸಿದ್ದು, ಇದನ್ನು ಪ್ರಶ್ನಿಸಿದ ದ್ವೇಷದಿಂದ ರೈಲಿನಿಂದ ಕೆಳಗಿಳಿದು ತಾನು ಕುಳಿತಿದ್ದ ಕಂಪಾರ್ಟ್‍ಮೆಂಟ್‍ಗೆ ಕಲ್ಲೆಸೆದು ಪರಾರಿಯಾಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನುಬಂಧಿಸುವಲ್ಲಿ ಯಶಸ್ವಿಯಾಘಿದ್ದರು.




