ಮಧೂರು: ಸನಾತನ ಸಂಸ್ಕøತಿ ಉಳಿಸಿ ಬೆಳೆಸಬೇಕಾದರೆ ಮಕ್ಕಳಲ್ಲಿ ಹಿಂದೂ ಅನುಷ್ಠಾನಗಳ ಬಗ್ಗೆ ಪ್ರಜ್ಞೆ ಮೂಡಿಸಬೇಕು. ಆ ಮೂಲಕ ಮಕ್ಕಳಲ್ಲಿ ಹಿಂದೂ ಸಂಸ್ಕøತಿಯ ಮೌಲ್ಯಗಳನ್ನು ಉದ್ದೀಪಿಸಬೇಕು. ಧಾರ್ಮಿಕ ಅರಿವು ಇಲ್ಲದಿದ್ದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ. ಧಾರ್ಮಿಕ ಪ್ರಜ್ಞೆ ಬೆಳೆದಂತೆ ಆಸ್ತಿಕ ಸಮಾಜ ನಿರ್ಮಾಣವಾಗುತ್ತದೆ ಎಂದು ಭಾಗವತಂ ವಿಲೇಜ್ ಟ್ರಸ್ಟ್ ಸಂಸ್ಥಾಪಕ ಪರಮಪೂಜ್ಯ ಶ್ರೀ ಉದಿತ್ ಚೈತನ್ಯ ಸ್ವಾಮೀಜಿ ಹೇಳಿದರು.
ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮಧೂರು ಬ್ರಹ್ಮಕಲಶೋತ್ಸವ ಹಾಗು ಮೂಡಪ್ಪ ಸೇವೆ ಕುಂಭ ಮೇಳಕ್ಕೆ ಕಡಿಮೆಯಿಲ್ಲದಂತೆ ಇಲ್ಲಿನ ವ್ಯವಸ್ಥೆ ರೂಪುಗೊಂಡಿದೆ. ದೇವಸ್ಥಾನಕ್ಕೆ ಬರುವ ಹಾದಿಯುದ್ದಕ್ಕೂ ಕೇಸರಿಮಯವನ್ನಾಗಿಸಿದ ಸ್ವಯಂಸೇವಕರ ಇಚ್ಛಾಶಕ್ತಿ ಹಿಂದೂ ಧರ್ಮ ನಾಶವಾಗಲಾರದು ಎಂಬುದನ್ನು ಸೂಚಿಸುತ್ತದೆ. ಮಕ್ಕಳಲ್ಲಿ ನಾಮಜಪ ಸಂಸ್ಕಾರ ಕಲಿಸಬೇಕೆಂದು ಅವರು ನುಡಿದರು.
ಮಾನವೀಯ ಮೌಲ್ಯ ಕಲಿಸುತ್ತದೆ : ದಿವ್ಯ ಉಪಸ್ಥಿತರಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಅವರು ಮಾತನಾಡಿ ಪ್ರತಿಯೊಬ್ಬ ಹಿಂದೂ ಜಾಗೃತನಾಗಬೇಕು. ಆ ಮೂಲಕ ಸಂಸ್ಕøತಿ, ಆಚಾರ, ವಿಚಾರ ಉಳಿಸಲು ಸಾಧ್ಯ. ಹಿಂದೂ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ. ಹಿಂದೂ ಸಂಸ್ಕøತಿ ಉಳಿದ್ದಲ್ಲಿ ವಿಶ್ವ ಕಲ್ಯಾಣ ಎಂದರು.
ನ್ಯಾಯವಾದಿ ಎಂ.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿ ಪ್ರಾಂತ್ಯ ಅಧ್ಯಕ್ಷ ಕೃಷ್ಣ ನಂಬೂದಿರಿ ಮುಲ್ಲಪ್ಪಳ್ಳಿ ದಿವ್ಯ ಉಪಸ್ಥಿರಿದ್ದರು. ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಎಡನೀರು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸುಧಾಕರ ಕೋಟಕುಂಜತ್ತಾಯ, ಉಪ್ಪಳ ಪಚ್ಲಂಪಾರೆ ಶ್ರೀ ಚೌಡಿ ಚಾಮುಂಡೇಶ್ವರಿ ಆರಾಧಕ, ಶ್ರೀ ದೈವದ ಮಧ್ಯಸ್ಥರಾದ ಬಾಬು ಯು ಪಚ್ಲಂಪಾರೆ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಮುರಳಿ ಕುಮಾರ್ ಬಂದಡ್ಕ ಸ್ವಾಗತಿಸಿ. ನಿವೃತ್ಯ ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಪ್ರಾಧ್ಯಾಪಕ ಪೆÇ್ರ.ಎ.ಶ್ರೀನಾಥ್ ಕೊಲ್ಲಂಗಾನ ವಂದಿಸಿದರು.




.jpg)
.jpg)
.jpg)
