ಮಧೂರು: ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀಧರ್ಮಶಾಸ್ತಾ, ದುರ್ಗಾ, ಸುಬ್ರಹ್ಮಣ್ಯ , ವೀರಭದ್ರ ಸನ್ನಿಧಿಯಲ್ಲಿ ಕಲಶಾಭಿಷೇಕ ಮಂಗಳವಾರ ನೆರವೆರಿತು. ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಚಂಡಿಕಾ ಯಾಗ, ಧ್ವಜಸ್ತಂಭ ಕಲಶ ನೆರವೇರಿತು. ಸಂಜೆ ಭದ್ರಕಮಂಡಲ ಪೂಜೆ, ಸಹಸ್ರಕಲಶ ಸಹಿತ ಬ್ರಹ್ಮಕಲಶಾಧಿವಾಸ, ನವಕುಂಡಗಳಲ್ಲಿ ಅಧಿವಾಸ ಹೋಮ, ಶ್ರಿ ಮಹಾಗಣಪತಿಗೆ 109 ಕಲಶ ಪ್ರತಿಷ್ಠೆ, ಅಧಿವಾಸ ಹೋಮ ನಡೆಯಿತು.
ಇಂದು ಸಂಭ್ರಮದ ಬ್ರಹ್ಮಕಲಶೋತ್ಸವ:
ಕುಂಬಳೆ ಸೀಮೆಯ ಇತಿಹಾಸಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಏ. 2ರಂದು ನೆರವೇರಲಿದೆ. ಳಗ್ಗೆ 7ರಿಂದ ಬ್ರಹ್ಮಕಲಶಾಭಿಷೇಕ ಆರಂಭಗೊಳ್ಳುವುದು. ಬೆಳಗ್ಗೆ 9.55ಕ್ಕೆ ಒದಗುವ ವೃಷಭಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ, ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ಅವಸ್ರುತ ಬಲಿ, ಮಹಾಮೂಡಪ್ಪ ಸೇವೆಯ ಪ್ರಾರ್ಥನೆ, ಧ್ವಜಾರೋಹಣ, 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಪೂಜೆ ನಡೆಯುವುದು.
ಸಾಯಂಕಾಲ 6ಗಂಟೆಗೆ ಶ್ರೀ ದೇವರ ಉತ್ಸವ ಬಲಿ, ಶ್ರೀಮಹಾಗಣಪತಿ ಮಂತ್ರಾನುಷ್ಠಾನ ನಡೆಯುವುದು
ಏ. 5ರಂದು ಶ್ರೀಮಹಾಗಣಪತಿಗೆ ಮೂಡಪ್ಪ ಸೇವೆ ನಡೆಯಲಿರುವುದು. ಅಂದು ಬೆಳಗ್ಗೆ 5ಕ್ಕೆ ದೀಪದ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ, ಮಧ್ಯಾಹ್ನ ಅಪ್ಪ ತಯಾರಿ ಆರಂಭ, ಸಂಜೆ 5ಕ್ಕೆ ಉತ್ಸವಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀ ದೇವರ ಸವಾರಿ, ರಾತ್ರಿ 8ಕ್ಕೆ ಶ್ರೀದೇವರ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ, ರಾತ್ರಿ 10ಕ್ಕೆ ಶ್ರೀ ಭೂತಬಲಿ ಮಹಾಮೂಡಪ್ಪಾಧಿವಾಸ ಹೋಮ, 11ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, ಶಯ್ಯಾ ಕಲ್ಪನೆ, ಕವಾಟಬಂಧನ ನಡೆಯುವುದು.






.jpg)
