ಕಾಸರಗೋಡು: ಗಾಂಜಾ ವಶಪಡಿಸಿಕೊಂಡ ಪರಕರಣದಲ್ಲಿ ಆರೋಪಿಯಾಗಿದ್ದ ವಾರೆಂಟ್ ಆರೋಪಿಯನ್ನು ಬಂಧಿಸಲು ತೆರಳಿದ್ದ ಅಬಕಾರಿ ಅಧಿಕಾರಿಗಳನ್ನು ಆರೋಪಿ ಇರಿದು ಗಾಯಗೊಳಿಸಿದ್ದಾನೆ. ಇದರಿಂದ ಎಕ್ಸೈಸ್ ನಾರ್ಕೋಟಿಕ್ ಸ್ಕ್ವಡ್ ಪ್ರಿವೆಂಟಿವ್ ಅದಿಕಾರಿ ಪ್ರಜಿತ್ ಕೆ.ಆರ್ ಹಾಗೂ ಸಿವಿಲ್ ಎಕ್ಸೈಸ್ ಅದಿಕಾರಿ ರಾಜೇಶ್ ಪಿ.ಗಾಐಗೊಂಡಿದ್ದಾರೆ.
ವಾರಂಟ್ ಅರೋಪಿ ಕುಂಬಳೆ ಬಂಬ್ರಾಣ ನಿವಾಸಿ ಅಬ್ದುಲ್ ಬಾಸಿತ್‍ನನ್ನು ಬಂಧಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೋಮವಾರ ಮಧ್ಯಾಹ್ನ ಕುಂಬಳೆ ಅಬಕಾರಿ ಪೆÇೀಲೀಸ್ ಠಾಣೆಯ ಪೆÇೀಲೀಸರು ಆರೋಪಿಯ ಬಂಧನಕ್ಕೆಂದು ತೆರಳಿದ್ದು, ಈ ಸಂದರ್ಭ ಚಾಕುವಿನಿಂದ ಇಬ್ಬರು ಅಧಿಕಾರಿಗಳಿಗೂ ಇರಿದಿದ್ದಾನೆ. ಗಾಯಾಳುಗಳು ಕಾಸರಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಗಿದ್ದಾರೆ.
ಕಳೆದ ವರ್ಷ 107 ಕಿ.ಗ್ರಾಂ ಗಾಂಜಾ ವಶಪಡಿಸಿಕೊಮಡ ಪರಕರಣದಲ್ಲಿ ಅಬ್ದುಲ್ ಬಾಸಿತ್ ಆರೋಪಿಯಾಘಿದ್ದು, ನಂತರ ತಲೆಮರೆಸಿಕೊಮಡಿದ್ದನು. ಈತ ಮನೆಯಲ್ಲಿರುವ ಬಗ್ಗೆ ಲಭಿಸಿದ ಸುಳಿವಿನನ್ವಯ ಬಂಧನಕ್ಕಾಗಿ ಅಬಕಾರಿ ದಳ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಗುತ್ತಿದ್ದಂತೆ ಕೃತ್ಯವೆಸಗಿದ್ದಾನೆ.




