ಕಾಸರಗೋಡು: ಕೇರಳ ಸ್ಟೇಟ್ ಟ್ರಾನ್ಸ್‍ಪೋರ್ಟ್(ಕೆಎಸ್‍ಟಿ) ನೌಕರರ ಸಂಘ್(ಬಿಎಂಎಸ್)ಕಾಸರಗೋಡು ಜಿಲ್ಲಾ ಸಮಾವೇಶ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಬಿಎಂಎಸ್ ರಾಜ್ಯ ಉಪಾಧ್ಯಕ್ಷ ವಕೀಲ ಪಿ ಮುರಳೀಧರನ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಎಡರಂಗ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ಮತ್ತು ಕೆಎಸ್‍ಆರ್‍ಟಿಸಿಯನ್ನು ವಿನಾಶದ ಅಮಚಿಗೆ ಕೊಮಡೊಯ್ಯುವ ಸರ್ಕಾರದ ಧೋರಣೆ ವಿರುದ್ಧ ಹೋರಾಡಲು ನೌಕರರ ಸಂಘಕ್ಕೆ ಮನ್ನಣೆ ನೀಡುವುದು ಅತ್ಯಗತ್ಯ ಎಂದು ತಿಳಿಸಿದರು. ಕೆಎಸ್‍ಟಿ ನೌಕರರ ಸಂಘವು ಕೆಎಸ್‍ಆರ್‍ಟಿಸಿಯಲ್ಲಿನ ಅತಿದೊಡ್ಡ ಒಕ್ಕೂಟವಾಗಿದೆ. ಈ ಸಂಸ್ಥೆ ಮತ್ತು ಅದರ ಉದ್ಯೋಗಿಗಳು ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆ ಸದಸ್ಯರಾಗುವುದು ಬಹಳ ಮುಖ್ಯ ಎಂದು ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಅನಿಲ್ ಬಿ. ನಾಯರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯವಾಹಕ ಪವಿತ್ರನ್ ಕೆ. ಕೆ. ಪುರಂ, ಬಿಎಂಎಸ್ ಜಿಲ್ಲಾಧ್ಯಕ್ಷ ಪಿ. ಉಪೇಂದ್ರನ್, ಎನ್‍ಜಿಒ ಸಂಘದ ಜಿಲ್ಲಾಧ್ಯಕ್ಷ ರಂಜಿತ್ ಕೆ, ಎನ್‍ಟಿಓ ಸಂಘದ ಜಿಲ್ಲಾಧ್ಯಕ್ಷ ಶ್ರೀ ಕೃಷ್ಣನ್ ಮಾಸ್ಟರ್, ಕೇರಳ ಪಿಂಚಣಿದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀ ಕುಞÂರಾಮನ್ ಕೇಳೋತ್, ಜಲ ಪ್ರಾಧಿಕಾರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀ ಮಧುಸೂದನನ್, ಬಿಪಿಇಎಫ್ ಜಿಲ್ಲಾ ಅಧ್ಯಕ್ಷ ಶ್ರೀ ಗೋಪಾಲಕೃಷ್ಣನ್, ಡಿಆರ್‍ಕೆಎಸ್ ಜಿಲ್ಲಾ ಕಾರ್ಯದರ್ಶಿ ಶ್ರೀ ತುಳಸಿದಾಸ್ ಉಪಸ್ಥಿತರಿದ್ದರು. ಕೆಎಸ್‍ಟಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಪಿ. ವಿಜಯನ್ ಅವರು ಸಮಾರೋಪ ಭಾಷಣ ಮಾಡಿದರು. ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ. ಪ್ರವೀಣ್ ವಂದಿಸಿದರು.
ಕೆಎಸ್‍ಟಿ ನೌಕರರ ಸಂಘದ ಜಿಲ್ಲಾ ಸಮಾವೇಶವನ್ನು ಬಿಎಂಎಸ್ ರಾಜ್ಯ ಉಪಾಧ್ಯಕ್ಷ ವಕೀಲ ಪಿ ಮುರಳೀಧರನ್ ಸಭೆಯನ್ನು ಉದ್ಘಾಟಿಸಿದರು.





