ಲಂಡನ್: ಸ್ಕಾಟ್ಲೆಂಡ್‌ನಲ್ಲಿ ಹಿಂದೂಗಳ ಕಡೆಗಣನೆ, ಪಕ್ಷಪಾತ ಮತ್ತು ಹಿಂದೂ ವಿರೋಧಿ ಪೂರ್ವಗ್ರಹ ಹೆಚ್ಚುತ್ತಿದೆ ಎಂಬುದನ್ನು ಎತ್ತಿ ತೋರಿಸುವ ಗೊತ್ತುವಳಿಯನ್ನು ಇಲ್ಲಿನ ಸಂಸತ್ತಿನಲ್ಲಿ ಮಂಡನೆಯಾಗಿದೆ.
'ಗಾಂಧಿಯನ್ ಪೀಸ್ ಸೊಸೈಟಿ' ಸಿದ್ಧಪಡಿಸಿದ್ದ ವರದಿ ಆಧರಿಸಿ, ಸ್ಕಾಟ್ಲೆಂಡ್‌ನ ಅಲ್ಬಾ ಪಕ್ಷದ ಸಂಸದೆ ಆಯಶ್ ರೀಗನ್ ಅವರು, ಈ ಗೊತ್ತುವಳಿ ಮಂಡಿಸಿದ್ದಾರೆ.
ಸ್ಕಾಟ್ಲೆಂಡ್‌ನಲ್ಲಿ ಹಿಂದೂಗಳು ಎದುರಿಸುತ್ತಿರುವ ತಾರತಮ್ಯವನ್ನು ಗುರುತಿಸಿದ ಈ ಗೊತ್ತುವಳಿಗೆ ಹಲವು ಸಂಸದರು ಬೆಂಬಲ ಸೂಚಿಸಿದರು.
'ಗಾಂಧಿಯನ್ ಪೀಸ್ ಸೊಸೈಟಿ' ರೂಪಿಸಿದ ಈ ವರದಿಯನ್ನು ಧಾರ್ಮಿಕ ಸಮಾನತೆ ಸಾಧಿಸುವತ್ತ ಐತಿಹಾಸಿಕ ಮತ್ತು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.




