ಕಾಸರಗೋಡು: ನಗರಸಭಾ ವ್ಯಾಪ್ತಿಯ ಅಣಂಗೂರು 9ನೇ ವಾರ್ಡಿನ ನೇತ್ರಾವತಿ ಕುಟುಂಬಶ್ರೀ ಸಿಡಿಎಸ್‍ನ 'ಅರಂಗ್'-2025 ಕುಟುಂಬ ಸಂಗಮ ಮತ್ತು ಫುಡ್ ಫೆಸ್ಟ್ ಗುರುವಾರ ನಗರಸಭಾಂಗಣದಲ್ಲಿ ನಡೆಯಿತು.
ನೇತ್ರಾವತಿ ಕುಟುಂಬಶ್ರೀ ನಂಬರ್ ವನ್ ಎಂಬ ಬೆಸ್ಟ್ ಅವಾರ್ಡ್‍ಗೆ ಅರ್ಹತೆ ಪಡೆದುಕೊಂಡಿದ್ದು, ಕುಟುಂಬಶ್ರೀಯು ತ್ರಿಫ್ಟ್ ವಿಷಯದಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿ ಸಭೆಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯಲ್ಲಿನ ವಿಷಯಗಳ ಬಗ್ಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ನೇತ್ರಾವತೀ ಕುಟುಂಬಶ್ರೀ ಬಹುಮಾನಕ್ಕೆ ಪಾತ್ರವಾಗಿತ್ತು. ಅದೇ ರೀತಿ ಅಸೌಖ್ಯದಲ್ಲಿದ್ದವರಿಗೆ ಧನ ಸಹಾಯ ಮತ್ತು ಅಭಯನಿಕೇತನ ಆಶ್ರಮಗಳಿಗೆ ಭೇಟಿ ನೀಡಿ ತಮ್ಮಿಂದ ಆಗುವಂತಹ ಸಹಾಯವನ್ನು ಹಾಗೂ ಅನಾಥ ಮಕ್ಕಳೊಂದಿಗೆ ಒಂದು ದಿನ ಕಾಲವನ್ನು ಕಳೆಯುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುವ ಮೂಲಕ ಸಂಘಟನೆ ಖ್ಯಾಥಿಗೆ ಪಾತ್ರವಾಗಿದೆ. ನೇತ್ರಾವತಿ ಕುಟುಂಬಶ್ರೀಯ ಅಧ್ಯಕ್ಷ ನಿರ್ಮಲ ಚಂದ್ರಶೇಖರ್, ಕಾರ್ಯದರ್ಶಿ ಆಶಾ ಹರೀಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.





