ಬದಿಯಡ್ಕ: ಬದಿಯಡ್ಕ ವಳಮಲೆ ನಿವಾಸಿ, ಪ್ರಗತಿಪರ ಕೃಷಿಕ ಹಾಗೂ ಬಂಟರ ಸಂಘದ ಮುಂದಾಳು ಪದ್ಮನಾಭ ಶೆಟ್ಟಿ(68)ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಧಾರ್ಮಿಕ ಮುಂದಾಳುವಾಗಿದ್ದ ಇವರು, ವಳಮಲೆ ಜನನ ತರವಾಡು ಸಮಿತಿ ಅಧ್ಯಕ್ಷ, ಬದಿಯಡ್ಕ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ ಅಧ್ಯಕ್ಷ, ಬಂಟರ ಸಂಘದ ಕುಂಬಳೆ ಫಿರ್ಕಾ ಕಾರ್ಯದರ್ಶಿಯಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.




