ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ಹತ್ಯೆಗೆ ಸಂಬಂಧಪಟ್ಟಂತೆ ಈಗಾಗಲೇ ಈ ಕೃತ್ಯದ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್ ಎಂದು ಗೊತ್ತಾಗಿದ್ದು, ಈ ಕೃತ್ಯದ ಹಿಂದೆ ಸೈಫುಲ್ಲಾ ಹಾಗೂ ಪಿಒಕೆನ ಇಬ್ಬರು ವ್ಯಕ್ತಿಗಳಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯ ಹೊಣೆಯನ್ನು ಲಷ್ಕರ್ - ಎ - ತೊಯ್ಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿ ಆರ್ ಎಫ್) ಹೊತ್ತುಕೊಂಡಿದ್ದು, ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್ ಲಷ್ಕರ್-ಎ-ತೊಯ್ಬಾದ ಉಪ ಮುಖ್ಯಸ್ಥನೆಂದು ಪರಿಗಣಿಸಲ್ಪಟ್ಟಿದ್ದಾನೆ.
ಉಗ್ರ ಸೈಫುಲ್ಲಾ ಖಾಲಿದ್ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದ್‌ಗೆ ಬಹಳ ಆಪ್ತ ಕೂಡ ಆಗಿದ್ದ.. ಈ ಹಿಂದೆ ಭಾರತದಲ್ಲಿ ನಡೆದ ಅನೇಕ ಪ್ರಮುಖ ಭಯೋತ್ಪಾದಕ ದಾಳಿಗಳಲ್ಲಿ ಇವನ ಹೆಸರು ಉಲ್ಲೇಖಿಸಲ್ಪಟ್ಟಿದೆ.
ಅಷ್ಟೇ ಅಲ್ಲದೆ ಸೈಫುಲ್ಲಾ ಪಾಕ್ ನಲ್ಲಿ ಐಷಾರಾಮಿ ಕಾರುಗಳಲ್ಲಿ ರಾಜರೋಷವಾಗಿ ತಿರುಗಾಡುತ್ತಿದ್ದಾರೆ, ಅವನಿಗೆ ಶಸ್ತ್ರಾಸ್ತ್ರಗಳಿಂದ ಶಸ್ತ್ರಸಜ್ಜಿತ ತರಬೇತಿ ಪಡೆದ ಲಷ್ಕರ್ ಉಗ್ರರು ರಕ್ಷಣೆ ನೀಡುತ್ತಾರೆ ಮತ್ತು ಸೇನೆಯ ರಕ್ಷಣೆ ಮತ್ತು ಐಎಸ್‌ಐ ಬೆಂಬಲದೊಂದಿಗೆ ಪಾಕಿಸ್ತಾನದಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾನೆ ಎನ್ನಲಾಗಿದೆ.
ಸೈಫುಲ್ಲಾ ಯಾವಾಗಲೂ ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದು, ಹೀಗಾಗಿ ಪಾಕ್ ಸೇನೆ ಕೂಡ ಆತನ ಉತ್ತಮ ಸಂಬಂಧ ಹೊಂದಿದ್ದಾನೆ. ಪಾಕ್ ನ ಕಂಗನ್‌ಪುರದಲ್ಲಿ ಕಾಣಿಸಿಕೊಂಡಿದ್ದ.. ಅಲ್ಲದೇ ಆತನನ್ನು ಪಾಕ್ ಸೇನೆಯ ಕರ್ನಲ್ ಜಾಹಿದ್ ಜರಿನ್ ಖಟ್ಟಕ್ ಅವರು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದರು.
ಈ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ವಿಷವನ್ನು ಕಾರುತ್ತಿದ್ದ ಮತ್ತು ಭಯೋತ್ಪಾದನೆಯನ್ನು ಹರಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದ. ಅಷ್ಟೇ ಅಲ್ಲದೆ ಫೆಬ್ರವರಿ 2, 2026 ರ ವೇಳೆಗೆ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮ ಮುಜಾಹಿದ್ದೀನ್ ಮುಂಬರುವ ತಿಂಗಳುಗಳಲ್ಲಿ ದಾಳಿಯನ್ನು ತೀವ್ರಗೊಳಿಸುತ್ತದೆ ಎಂದು ಬಹಿರಂಗವಾಗಿ ಹೇಳಿದ್ದ.

