ಕಾಸರಗೋಡು::ಲಾಟರಿ ಟಿಕೆಟ್ ಬೆಲೆಯನ್ನು ಹೆಚ್ಚಳಗೊಳಿಸುವ ತೀರ್ಮಾನದಿಂದ ಸರ್ಕಾರ ಹಿಂದೆ ಸರಿಯುವಂತೆ ಜಿಲ್ಲಾ ಲಾಟರಿ ಏಜೆಂಟ್ ಆ್ಯಂಡ್ ಸೆಲ್ಲರ್ಸ್ ಸಂಘ್(ಬಿಎಂಎಸ್)ನ ಜಿಲ್ಲಾ ವಾರ್ಷಿಕ ಸಮಾವೇಶದಲ್ಲಿ ಆಗ್ರಹಿಸಲಾಯಿತು.
ಬಿಎಂಎಸ್ ಜಿಲ್ಲಾ ಕಚೇರಿಯಲ್ಲಿ ನಡೆದ ಸಮಾವೇಶವನ್ನು ಸಂಘಟನೆ ಜಿಲ್ಲಾ ಅಧ್ಯಕ್ಷ ಕೆ. ಉಪೇಂದ್ರನ್ ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ ಬಾಬು ಅಧ್ಯಕ್ಷತೆ ವಹಿಸಿದ್ದರು. ಟಿಕೆಟ್ ಬೆಲೆ ಹೆಚ್ಚಳಗೊಳಿಸುವ ತೀರ್ಮಾನದಿಂದ ಹಿಂದೆ ಸರಿಯಬೇಕು, ಸಣ್ಣ ಏಜೆಂಟ್‍ಗಳಿಗೂ ಅಗತ್ಯದ ಟಿಕೆಟ್ ವಿತರಣೆಮಾಡಬೇಕು, ಬೋನಸ್ 10ಸಾವಿರ ರೂ. ಆಗಿ ಹೆಚ್ಚಿಸಬೇಕು, ಟಿಕೆಟ್ ವಿತರಣೆಯಲ್ಲಿನ ಲೋಪದೋಷ ಪರಿಹರಿಸಬೇಕು, ಕಾರ್ಮಿಕರ ಕಮಿಷನ್ ಹೆಚ್ಚಿಸಬೇಕು ಮುಂತಾದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಪಿ. ದಿನೇಶ್ ಉಪಸ್ಥಿತರಿದ್ದರು. ಈ ಸಂದರ್ಭ ಸಂಘಟನೆ ನೂತನ ಪದಾಧಿಕಾರಿಗಳ ಅಯ್ಕೆ ನಡೆಯಿತು.ಕೆ.ವಿ ಬಾಬು ಅಧ್ಯಕ್ಷ, ಬಾಬುಮೋನ್ ಚೆಂಗಳ ಕಾರ್ಯದರ್ಶಿ ಹಾಗೂ ರವೀಂದ್ರನ್ ಶಿವಾಜಿನಗರ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ಫೆಡರೇನ್ ರಜ್ಯ ಸಮಿತಿ ಉಪಾಧ್ಯಕ್ಷ ಕೃಷ್ಣನ್ ಸಮಾರೋಪ ಭಾಷಣ ಮಾಡಿದರು. ಬಾಬುಮೋನ್ ಚೆಂಗಳ ಸ್ವಾಗತಿಸಿದರು. ರವಿಚಂದ್ರನ್ ಶಿವಾಜಿನಗರ ವಂದಿಸಿದರು.





