ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ರಾಜ್ಯಮಟ್ಟದ ಉದ್ಘಾಟನೆಯು ಏಪ್ರಿಲ್ 21 ರಂದು ಬೆಳಿಗ್ಗೆ 10 ಗಂಟೆಗೆ ಕಾಲಿಕಡವು ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಪ್ರಚಾರಾರ್ಥ ಜನಪ್ರತಿನಿಧಿಗಳು ಮತ್ತು ಮಾಧ್ಯಮ ಸಿಬ್ಬಂದಿಗಾಗಿ ಸೌಹಾರ್ದ ಫುಟ್‍ಬಾಲ್ ಪಂದ್ಯಾಟ ಆಯೋಜಿಸಲಾಯಿತು.
ಪಂದ್ಯಾಟದಲ್ಲಿ ಮಾಧ್ಯಮ ಪ್ರತಿನಿಧೀಗಳ ತಂಡ ಪಂದ್ಯಾಟ ಗೆದ್ದುಕೊಂಡಿತು.
ಕಾಞಂಗಾಡು ಕೊವ್ವಲ್‍ಪಳ್ಳಿ ಟರ್ಫ್‍ನಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ ಕಾಞಂಗಾಡ್ ನಗರಸಭಾ ಅಧ್ಯಕ್ಷೆ ಕೆ. ವಿ. ಸುಜಾತಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನೀಲೇಶ್ವರಂ ನಗರಸಭಾ ಉಪಾಧ್ಯಕ್ಷ ಪಿ.ಪಿ. ಮುಹಮ್ಮದ್ ರಫಿ ಆಟಗಾರರನ್ನು ಪರಿಚಯಿಸಿದರು. ಇ. ವಿಜಯಕೃಷ್ಣನ್, ಕೆ.ಎಸ್. ಹರಿ, ಬಾಬು ಕೊತ್ತಪಾರ, ರತೀಶ್ ಕಾಲಿಕಡವು, ಫಝಲ್ ರಹಮಾನ್, ಸುನೀಶ್, ರಿಯಾಸ್ ಅಮಲಡ್ಕಂ, ಸನೂಪ್ ತ್ರಿಕರಿಪುರ, ಕೆ.ವಿ. ಸುನಿಲ್ ಪತ್ರಕರ್ತರ ತಂಡವನ್ನು ಹಾಗೂ ಮುಹಮ್ಮದ್ ರಫಿ, ಶಂಸುದ್ದೀನ್ ಅರಿಂಚಿರ, ಎಂ.ಕೆ.ವಿನಯರಾಜ್, ಅನ್ವರ್ ಸಾದಿಕ್, ಕೆ.ವಿ. ಸುಜಿತ್, ವಿ. ಅಬೂಬಕ್ಕರ್ ಜನಪ್ರತಿನಿಧಿಗಳ ತಂಡವನ್ನು ಪ್ರತಿನಿಧಿಕರಿಸಿದ್ದರು.
(ಫುಟ್‍ಬಾಲ್ ಪಂದ್ಯಾಟದಲ್ಲಿ ಗೆಲುವು ಸಾಧಿಸಿದ ಪತ್ರಕರ್ತರ ತಂಡ )





