ಕಾಸರಗೋಡು: ಎಡರಂಗ ಸರ್ಕಾರದ ನಾಲ್ಕನೇ ವರ್ಷಾಚರಣೆ ರಾಜ್ಯಮಟ್ಟದ ಉದ್ಘಾಟನೆ ಜಿಲ್ಲೆಯ ಕಾಲಿಕಡವು ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ಕಚೇರಿ ಆರಂಭಿಸಲಾಯಿತು. ಸ್ವಾಗತ ಸಮಿತಿ ಕಚೇರಿಯನ್ನು ಶಾಸಕ ಎಂ. ರಾಜಗೋಪಾಲನ್ ಉದ್ಘಾಟಿಸಿದರು. ಪಿಲಿಕೋಡು ಪಂಚಾಯತ್ ಅಧ್ಯಕ್ಷ ಪಿ.ಪಿ. ಪ್ರಸನ್ನ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ವಿ. ಚಂದ್ರಮತಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ವಿ. ಸುಲೋಚನಾ, ಪಿಆರ್‍ಡಿ ಎಲೆಕ್ಟ್ರಾನಿಕ್ಸ್ ಮಾಧ್ಯಮ ವಿಭಾಗದ ಹೆಚ್ಚುವರಿ ನಿರ್ದೇಶಕ ವಿ.ಪಿ. ಪ್ರಮೋದ್ ಕುಮಾರ್, ಕ್ಷೇತ್ರ ಪ್ರಚಾರ ಮತ್ತು ಸಾಂಸ್ಕøತಿಕ ವ್ಯವಹಾರಗಳ ಉಪ ನಿರ್ದೇಶಕ ಎಂ. ನಫಿಹ್, ಕೋಯಿಕ್ಕೋಡ್ ಪ್ರಾದೇಶಿಕ ಉಪ ನಿರ್ದೇಶಕ ಕೆ.ಟಿ. ಶೇಖರನ್, ಎ.ಡಿ.ಎಂ. ಪಿ.ಅಖಿಲ್, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ವಿ.ಪ್ರದೀಪ್, ಪಿ.ಪ್ರಮೀಳಾ, ಎನ್.ಪ್ರಸೀತಾಕುಮಾರಿ, ಪಿ.ಅಜಿತ, , ಕೆ.ಭಜಿತ್, ಸಿ.ವಿ. ರಾಧಾಕೃಷ್ಣನ್, ಉಪಸಮಿತಿ ಪದಾಧಿಕಾರಿಗಳು ಉಪಸ್ಥೀತರಿದ್ದರು.
ಕಾಲಿಕಡವು ಮೈದಾನದಲ್ಲಿ ಸಮಿತಿ ಕಚೇರಿಯನ್ನು ತೆರೆಯಲಾಗಿದ್ದು, 21ರಂದು ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ರಾಜ್ಯ ಮಟ್ಟದ ಉದ್ಘಾಟನೆಯನ್ನು ಉದ್ಘಾಟಿಸುವರು.





