ಕಾಸರಗೋಡು: ಜಿಲ್ಲಾ ಪ್ರವಾಸಿ ಸಂಘ ಕತಾರ್ ('ಕಡೆಕ್ಸಾ ಕತಾರ್') ಮತ್ತು ವಿಶ್ವ ಮಲಯಾಳಿ ಮಂಡಳಿ ಕತಾರ್ (ಡಬ್ಲ್ಯೂಎಂಸಿ ಕತಾರ್) ಜಂಟಿಯಾಗಿ ªಷ್ಠೀÀiÁದಕ ದ್ರವ್ಯ ದುರುಪಯೋಗದ ವಿರುದ್ಧ ಜಾಗೃತಿ ಮತ್ತು ಸಮುದಾಯ ಸಹಕಾರವನ್ನು ಆಧರಿಸಿದ ವಿಶೇಷ ಅಭಿಯಾನ ಏಪ್ರಿಲ್ 26ರಂದು ಮಧ್ಯಾಹ್ನ 2 ಗಂಟೆಗೆ ಕಾಸರಗೋಡಿನ ಬೋವಿಕಾನದ ಶ್ರೀಪುರಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಖ್ಯಾತ ಅಂತಾರಾಷ್ಟ್ರೀಯ ಮಾನಸಿಕ ತರಬೇತುದಾರ, ಪ್ರೇರಕ ಭಾಷಣಕಾರ ಮತ್ತು ಪೆÇಲೀಸ್ ಅಧಿಕಾರಿ ಫಿಲಿಪ್ ಮಂಬಾಡ್ ಮುಖ್ಯ ಅತಿಥಿಯಾಗಿ ಮಾತನಾಡಲಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಹರಿಕುಮಾರ್ ಕಾನತ್ತೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಆರೋಗ್ಯಕರ ಜೀವನಶೈಲಿಯನ್ನು ಆಚರಿಸುವ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಕಾಸರಗೋಡಿನ ಪ್ರಸಾದ್ ನೇತ್ರಾಲಯ ಸೂಪರ್‍ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ಕಣ್ಣಿನ ಉಚಿತ ತಪಾಸಣೆ ನಡೆಯಲಿವೆ. ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಯಲ್ಲಿ ಗೋಪಿನಾಥನ್ ಕೈಂದಾರ್, ಜಕರಿಯಾ ಅಬ್ದುಲ್ಲಾ ಉಪಸ್ಥಿತರಿದ್ದರು.





