ಕಾಸರಗೋಡು : ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರನ್ನು ಕಾಸರಗೋಡಿನ ವಿವಿಧೆಡೆ ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಲಾಯಿತು. ಕಯ್ಯಾರ್ ಕ್ರಿಸ್ತರಾಜ ಇಗರ್ಜಿಯಲ್ಲಿ ನಡೆದ ಬಲಿಪೂಜೆಗೆ ಮಂಗಳೂರು ಸಂತ ಅಲೋಶಿಯಸ್‍ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಫಾ. ರೋಯ್‍ಸ್ಟನ್‍ಮಾಡ್ತಾ ನೇತೃತ್ವ ನೀಡಿದರು. ಕಾಸರಗೋಡಿನ ವಿವಿಧೆಡೆ ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಲಾಯಿತು. ಶನಿವಾರ ರಾತ್ರಿ ಹಾಗೂ ಭಾನುವಾರ ಇಗರ್ಜಿಗಳಲ್ಲಿಈಸ್ಟರ್ ಹಬ್ಬದ ಅಂಗವಾಘಿ ಬಲಿಪೂಜೆ ನಡೆಯಿತು.
ಕಯ್ಯಾರ್ ಕ್ರಿಸ್ತರಾಜ ಇಗರ್ಜಿಯಲ್ಲಿ ನಡೆದ ಬಲಿಪೂಜೆಗೆ ಮಂಗಳೂರು ಸಂತ ಅಲೋಶಿಯಸ್‍ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಫಾ. ರೋಯ್‍ಸ್ಟನ್‍ಮಾಡ್ತಾ ನೇತೃತ್ವ ನೀಡಿದರು. ಇಗರ್ಜಿ ಧರ್ಮಗುರು ಫಾ . ವಿಶಾಲ್ ಮೋನಿಸ್ ಉಪಸ್ಥಿತರಿದ್ದರು. ಹೊಸ ಅಗ್ನಿಯ ಆಶೀರ್ವಚನದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಬೈಬಲ್ ನ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದಭಾಗಗಳ ವಾಚನ ಹಾಗೂ ಧರ್ಮಗುರುಗಳ ಪ್ರವಚನ, ಸಂದೇಶ ನೀಡಿದರು. ಪವಿತ್ರ ಜಾಲದ ಆಶೀರ್ವಚನ ಹಾಗೂ ಕ್ರೈಸ್ತ ವಿಶ್ವಾಸದ ಮರು ದೃಢೀಕರಣ ಹಾಗೂ ಕ್ರೈಸ್ತ ಸಂತರನ್ನು ಸ್ಮರಿಸಲಾಯಿತು. ಬಲಿಪೂಜೆ ಬಳಿಕ ಕಯ್ಯಾರ್ ವಿಜಯ್ ಜೇಸು ರಾಜ್ ಕಾನ್ವೆಂಟ್‍ನ ಸುಪೀರಿಯರ್ ಹಾಗೂ ಕಳೆದ `18 ವರ್ಷಗಳಿಂದಸೇವೆ ಸಲ್ಲಿಸಿ ವರ್ಗಾವಣೆ ಗೊಳ್ಳುತ್ತಿರುವ ಸಿ. ಜಾಸ್ಮಿನ್ ಲೂವಿಸ್, ಕಯ್ಯಾರ್ ಡೋನ್ ಬೊಸ್ಕೊ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಮ್ಯಾಗ್ದಲೆನ್ ಕ್ರಾಸ್ತಾ, ಮಂಗಳೂರು ವಿಶ್ವವಿದ್ಯಾನಿಲಯ ಎಂ .ಎ ಪೆÇಲಿಟಿಕಲ್ ಸಯನ್ಸ್‍ನಲ್ಲಿ ದ್ವಿತೀಯ ರ್ಯಾಂಕ್ ಪಡೆದ ಜೋಸ್ಲಿನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಕಯ್ಯಾರು ಕ್ರಿಸ್ತರಾಜ ಇಗರ್ಜಿಯಲ್ಲಿ ನಡೆದ ಬಲಿಪೂಜೆಗೆ ಮಂಗಳೂರು ಸಂತ ಅಲೋಶಿಯಸ್‍ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಫಾ. ರೋಯ್‍ಸ್ಟನ್‍ಮಾಡ್ತಾ ನೇತೃತ್ವ ನೀಡಿದರು.





