HEALTH TIPS

ವಾಟ್ಸಾಪ್‌ನಲ್ಲಿ Meta AI ವೈಶಿಷ್ಟ್ಯ ತೆಗೆದುಹಾಕಬಹುದು.. ಹೇಗೆ ಗೊತ್ತಾ?

 ವಾಟ್ಸಾಪ್ ನಂ.1 ಮೆಸೇಜಿಂಗ್ ಆಪ್ ಎಂಬುದು ಗೊತ್ತಿರುವ ವಿಷಯ. ಪ್ರಸ್ತುತ ಪ್ರಪಂಚದಾದ್ಯಂತ ಲಕ್ಷಾಂತರ ಜನರು ವಾಟ್ಸಾಪ್ (Whatsapp) ಬಳಸುತ್ತಾರೆ. ವಾಟ್ಸಾಪ್ ಭಾರತದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ. ಹೌದು, ಪ್ರಸ್ತುತ ವಾಟ್ಸಾಪ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಈ ವಾಟ್ಸಾಪ್‌ನಲ್ಲಿ ಹೊಸ ಹೊಸ ವೈಶಿಷ್ಟ್ಯಗಳು ಬರುತ್ತಿವೆ. ಈಗಾಗಲೇ ಕೆಲವು ಫೀಚರ್ ಲಭ್ಯವಿದ್ದರೆ, ಇನ್ನು ಕೆಲವು ಪರೀಕ್ಷಾ ಹಂತದಲ್ಲಿವೆ. ಇದೀಗ, ವಾಟ್ಸಾಪ್‌ನಲ್ಲಿ ಎಐ (AI) ವೈಶಿಷ್ಟ್ಯವನ್ನು ತೆಗೆದುಹಾಕುವ ಆಯ್ಕೆ ಲಭ್ಯವಿದೆ. ನಿಮ್ಮ ಚಾಟ್ ಬಾಕ್ಸ್‌ನಿಂದ ಎಐ ಫಿಚರ್ ಅನ್ನು ತೆಗೆದುಹಾಕಲು, ನೀವು ಈ ತಂತ್ರಗಳನ್ನು ಬಳಸಬಹುದು.

ಕೆಲವು ಜನರು ಮಾತ್ರ ವಾಟ್ಸಾಪ್‌ನಲ್ಲಿ ನೀಲಿ ಐಕಾನ್ ಇಷ್ಟಪಡುತ್ತಾರೆ. ಒಂದು ವೇಳೆ ಈ ನೀಲಿ ಐಕಾನ್ ಇಷ್ಟವಾಗದಿದ್ದರೆ, ಅದನ್ನು ಸುಲಭವಾಗಿ ತೆಗೆದುಹಾಕಬಹುದು. ಆದರೆ, ಇದನ್ನು ತೆಗೆದುಹಾಕುವುದು ಹೇಗೆ? ಮೆಟಾ ಎಐ ವಾಟ್ಸಾಪ್‌ನಲ್ಲಿ ಇಂತಹ ವೈಶಿಷ್ಟ್ಯವನ್ನು ನೀಡುವುದಿಲ್ಲ. ಆದಾಗ್ಯೂ, ನೀವು ಗೊಂದಲಕ್ಕೀಡಾಗುವು ಅಗತ್ಯವಿಲ್ಲ. ಈ ಐಕಾನ್ ಅನ್ನು ಸುಲಭವಾಗಿ ರಿಮ್ಯೂವ್ ಮಾಡಬಹುದು. ಬನ್ನಿ, ಈ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.



ವಾಟ್ಸಾಪ್‌ನಿಂದ Meta AI ತೆಗೆದುಹಾಕಲು ಹೀಗೆ ಮಾಡಿ

ವಾಟ್ಸಾಪ್‌ನಲ್ಲಿರುವ ಈ ವೈಶಿಷ್ಟ್ಯದ ಬಗ್ಗೆ ಆಸಕ್ತಿಯೇ ಇಲ್ಲದಿದ್ದರೆ, ಇದನ್ನು ತೆಗೆದುಹಾಕಲು ಯಾವುದೇ ಮಾರ್ಗವಿಲ್ಲ. ನೀವು ಇದನ್ನು ನಿರ್ಲಕ್ಷಿಸಲು ಮತ್ತು ಬಳಸದಿರಲು ಆಯ್ಕೆ ಮಾಡಬಹುದು. ಆದಾಗ್ಯೂ, ಈ ಬಟನ್ ಆಪ್‌ನಲ್ಲಿ ಉಳಿಯುತ್ತದೆ. ನೀವು ಈ ವೈಶಿಷ್ಟ್ಯವನ್ನು ವೈಯಕ್ತಿಕ ಚಾಟ್‌ ಅಥವಾ ಎಲ್ಲಾ ಚಾಟ್‌ಗಳಲ್ಲಿ ಪುನಃ ಹೊಂದಿಸಬಹುದು. ಚಾಟ್ ಅಳಿಸುವುದು ಕೆಲಸ ಮಾಡುವುದಿಲ್ಲ. ನಾವು ಈ ಕೆಳಗೆ ತಿಳಿಸುವ ಸುಲಭ ಟ್ರಿಕ್ ಬಳಸುವ ಮೂಲಕ ಇದನ್ನು ಸಾಧ್ಯವಾಗಿಸಬಹುದು. ಮರುಹೊಂದಿಸುವ ಆಜ್ಞೆಗಳನ್ನು ಬಳಸಬೇಕಾಗುತ್ತದೆ.

Meta AI ಮರುಹೊಂದಿಸಲು ಏನು ಮಾಡಬೇಕು?

* ನೀವು ಒಂದೇ ಚಾಟ್‌ಗಾಗಿ ಇದನ್ನು ಬಳಸಬಹುದು. ಯಾವುದೇ ಪ್ರತ್ಯೇಕ ಚಾಟ್‌ನಲ್ಲಿ /reset-ai ಎಂದು ಟೈಪ್ ಮಾಡಬೇಕು. ಇದು ಆ ಚಾಟ್‌ನಲ್ಲಿ ಮಾತ್ರ ಮೆಟಾ ಎಐ ಅನ್ನು ಮರುಹೊಂದಿಸುತ್ತದೆ.

* ನೀವು ಎಲ್ಲಾ ಚಾಟ್‌ಗಳಿಗೆ ಇದನ್ನು ಬಳಸಬಹು. ನೀವು ಎಲ್ಲಾ ಚಾಟ್‌ಗಳಲ್ಲಿ ಅಥವಾ ಗುಂಪು ಚಾಟ್‌ಗಳಲ್ಲಿ ಮೆಟಾ ಎಐ ಅನ್ನು ಮರುಹೊಂದಿಸಬಹುದು. ಇದಕ್ಕಾಗಿ ನೀವು ಚಾಟ್‌ನಲ್ಲಿ /reset-all-ais ಎಂದು ಟೈಪ್ ಮಾಡಬೇಕು.

* ನೀವು ಎಲ್ಲಾ ಚಾಟ್‌ಗಳಿಗೆ ಇದನ್ನು ಬಳಸಬಹು. ನೀವು ಎಲ್ಲಾ ಚಾಟ್‌ಗಳಲ್ಲಿ ಅಥವಾ ಗುಂಪು ಚಾಟ್‌ಗಳಲ್ಲಿ ಮೆಟಾ ಎಐ ಅನ್ನು ಮರುಹೊಂದಿಸಬಹುದು. ಇದಕ್ಕಾಗಿ ನೀವು ಚಾಟ್‌ನಲ್ಲಿ /reset-all-ais ಎಂದು ಟೈಪ್ ಮಾಡಬೇಕು.

* ಮೆಟಾ ಎಐ ಅನ್ನು ಮರುಹೊಂದಿಸುವುದರಿಂದ ಚಾಟ್ ಮತ್ತು ಸಂದೇಶ ಡೇಟಾ ಅಳಿಸಿ ಹೋಗುತ್ತದೆ. ಆದರೆ, ಇದು ನಿಮ್ಮ ವೈಯಕ್ತಿಕ ಡೇಟಾದ ಮೇಲೆ ಪರಿಣಾಮ ಬೀರುವುದಿಲ್ಲ.

ಹೀಗೆ ನೀವು ವಾಟ್ಸಾಪ್‌ನಲ್ಲಿ ಮೆಟಾ ಎಐ (Meta AI) ಅನ್ನು ಮರುಹೊಂದಿಸಬಹುದು. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಮೆಟಾ ಎಐ ಅನ್ನು ಬಳಸಬಹುದು. ಇಲ್ಲವೇ ಅದನ್ನು ಬಳಸದಿರಬಹುದು. ಸದ್ಯ, ವಾಟ್ಸಾಪ್ ಇಂತಹ ಯಾವುದೇ ಫೀಚರ್ ಅನ್ನು ಅಪ್ಡೇಟ್ ಮಾಡಿಲ್ಲ.

ಹಗರಣಗಳು, ಸ್ಪ್ಯಾಮ್ ನಿಲ್ಲಿಸಲು ಕಠಿಣ ಕ್ರಮ

ವಾಟ್ಸಾಪ್ ಬಳಕೆದಾರಿಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ವರ್ಷದ ಜನವರಿಯಲ್ಲಿ 9.9 ಮಿಲಿಯನ್ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ (WhatsApp Ban) ಎಂದು ವಾಟ್ಸಾಪ್ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಹಗರಣಗಳು, ಸ್ಪ್ಯಾಮ್ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಟ್ಸಾಪ್ ಹೇಳಿದೆ. ಯಾವುದೇ ಬಳಕೆದಾರರು ನಿಯಮಗಳನ್ನು ಉಲ್ಲಂಘಿಸಿದರೆ, ಭವಿಷ್ಯದಲ್ಲಿ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಐಟಿ ಕಾಯ್ದೆಯ ಪ್ರಕಾರ, ವಾಟ್ಸಾಪ್ ನಿಯಮಿತವಾಗಿ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. ಇದರಲ್ಲಿ, ಕಂಪನಿಯು ತನ್ನ ಬಳಕೆದಾರರಿಗೆ ಸುರಕ್ಷಿತ ಮತ್ತು ಸುಭದ್ರ ವೇದಿಕೆಯನ್ನು ಒದಗಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

99 ಲಕ್ಷ 67 ಸಾವಿರ ವಾಟ್ಸಾಪ್ ಖಾತೆಗಳು ಸ್ಥಗಿತ

ಜನವರಿ 1 ರಿಂದ ಜನವರಿ 30 ರವರೆಗೆ ಒಟ್ಟು 99 ಲಕ್ಷ 67 ಸಾವಿರ ವಾಟ್ಸಾಪ್ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ವಾಟ್ಸಾಪ್ ತಿಳಿಸಿದೆ. ಈ ಪೈಕಿ 13.27 ಲಕ್ಷ ವಾಟ್ಸಾಪ್ ಖಾತೆಗಳನ್ನು ಯಾವುದೇ ದೂರು ಬರುವ ಮೊದಲೇ ನಿಷೇಧಿಸಲಾಗಿದೆ. ಜನವರಿಯಲ್ಲಿ ವಾಟ್ಸಾಪ್ ತನ್ನ ಬಳಕೆದಾರರಿಂದ 9,474 ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 239 ವಾಟ್ಸಾಪ್ ಅಕೌಂಟ್‌ಗಳ ಮೇಲೆ ಕ್ರಮ ಕೈಗೊಂಡಿದೆ. ಖಾತೆಗಳನ್ನು ನಿರ್ಬಂಧಿಸುವುದು ಸೇರಿದಂತೆ ಇತರೆ ಕ್ರಮಗಳನ್ನು ವಾಟ್ಸಾಪ್ ತೆಗೆದುಕೊಂಡಿದೆ.

ವಾಟ್ಸಾಪ್ ಮೂಲಕ ಉಬರ್ ಕ್ಯಾಬ್‌ ಬುಕ್ ಮಾಡಬಹುದು

ಇದು ಆಧುನಿಕ ಯುವ. ದಿನದಿಂದ ದಿನಕ್ಕೆ ತಂತ್ರಜ್ಞಾನ ಬಳಕೆ ಹೆಚ್ಚುತ್ತಿದೆ. ನೀವು ಕ್ಯಾಬ್ ಬುಕ್ ಮಾಡಲು ಬಯಸಿದರೆ, ಆಯಾ ಕ್ಯಾಬ್ ಮೊಬೈಲ್ ಆಪ್ ಪ್ರಾರಂಭಿಸಿರುತ್ತದೆ. ಅದರ ಮೂಲಕವೇ ಕ್ಯಾಬ್ ಬುಕ್ ಮಾಡಬಹುದು. ಆದರೆ, ವಾಟ್ಸಾಪ್‌ (WhatsApp) ಮೂಲಕ ಉಬರ್ ಕ್ಯಾಪ್ ಬುಕ್ ಮಾಡಬಹುದು. ಈ ಸೌಲಭ್ಯವನ್ನು ವಾಟ್ಸಾಪ್ ತಂದಿದೆ. ಬನ್ನಿ, ವಾಟ್ಸಾಪ್ ಮೂಲಕ ಕ್ಯಾಬ್ ಬುಕ್ ಮಾಡುವುದು ಹೇಗೆ? ಎನ್ನುವುದನ್ನು ತಿಳಿಯೋಣ.

* ನೀವು ವಾಟ್ಸಾಪ್ ಮೂಲಕ ಎಲ್ಲಿ ಬೇಕಾದರೂ ಕ್ಯಾಬ್ ಬುಕ್ ಮಾಡಬಹುದು. ನೀವು ಇದಕ್ಕಾಗಿ ನಿಮ್ಮ ಫೋನಿನಲ್ಲಿ 7292000002 ನಂಬರ್‌ ಸೇವ್ ಮಾಡಬೇಕು.

* ಈ ನಂಬರ್ ಸೇವ್‌ ಮಾಡಿದ ಬಳಿಕ, ನಿಮ್ಮ ಫೋನಿನಲ್ಲಿ ವಾಟ್ಸಾಪ್‌ ಅನ್ನು ಓಪನ್ ಮಾಡಿ. ಮತ್ತು ರಿಫ್ರೆಶ್ ಮಾಡಿ. ಹೊಸದಾಗಿ ಸೇವ್ ಮಾಡಿದ ನಂಬರ್‌ ನಿಮಗೆ ಇಲ್ಲಿ ಕಾಣುತ್ತದೆ. ಇದರ ನಂತರ, ಚಾಟ್ ವಿಭಾಗವನ್ನು ತೆರೆಯಿರಿ ಮತ್ತು ಚಾಟ್‌ನಲ್ಲಿ ಹಾಯ್ ಎಂದು ಮೆಸೇಜ್ ಕಳುಹಿಸಿ.

* ಆಗ ಭಾಷೆಯನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳುತ್ತದೆ. ನಿಮ್ಮ ಭಾಷೆಯನ್ನು ನೀವು ಹಿಂದಿ ಅಥವಾ ಇಂಗ್ಲಿಷ್ ಅನ್ನು ಆಯ್ಕೆ ಮಾಡಬಹುದು. ಇದರ ನಂತರ ನಿಮ್ಮ ಸ್ಥಳವನ್ನು ನಮೂದಿಸಿ. ಪಿಕಪ್ ಸ್ಥಳವನ್ನು ಆಯ್ಕೆಮಾಡಿ. ಇದರ ನಂತರ ನಿಮ್ಮ ಕ್ಯಾಬ್ ಅನ್ನು ಬುಕ್ ಮಾಡಲಾಗುತ್ತದೆ.

* ನಿಮ್ಮ ವಾಟ್ಸಾಪ್‌ನಲ್ಲಿ ಚಾಲಕರ ವಿವರಗಳು ಬರುತ್ತವೆ. ಇದು ಶೇರ್ ಪಿನ್, ಕಾಂಟಾಕ್ಟ್‌ ನಂಬರ್ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ. ಚಾಲಕನಿಗೆ ಪಿನ್ ಹೇಳುವ ಮೂಲಕ ನಿಮ್ಮ ಪ್ರಯಾಣವನ್ನು ನೀವು ಪ್ರಾರಂಭಿಸಬಹುದು.

ಈ ವಿಧಾನದ ಮೂಲಕವೂ ಬುಕ್ ಮಾಡಬಹುದು

ನೀವು ಹಾಯ್ ಎಂಬ ಮೆಸೇಜ್ ಕಳುಹಿಸಿದ ನಂತರ, ಯಾವುದೇ ಉತ್ತರವನ್ನು ಪಡೆಯದಿದ್ದರೆ ಚಿಂತಿಸಬೇಡಿ. ಈ ಸೇವೆಯು ವಿವಿಧ ಫೋನ್‌ಗಳಲ್ಲಿ ವಿಭಿನ್ನವಾಗಿ ಕೆಲಸ ಮಾಡುತ್ತದೆ. ನಿಮಗೆ ಲಾಗಿನ್ ಮಾಡುವ ಆಯ್ಕೆ ಇರುತ್ತದೆ. ನೀವು ಲಾಗಿನ್ ಅನ್ನು ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನಮೂದಿಸಿ. ನಿಮ್ಮ ನೋಂದಾಯಿತ ಸಂಖ್ಯೆಗೆ ಒಟಿಪಿ (OTP) ಕಳುಹಿಸಲಾಗುತ್ತದೆ. ಒಟಿಪಿ ಅನ್ನು ನಮೂದಿಸಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. ಇದರ ನಂತರ ನೀವು ಹೊಸದಾಗಿ ಕ್ಯಾಬ್ ಬುಕ್ ಮಾಡಬಹುದು.

ಒಟ್ಟಾರೆ, ತಂತ್ರಜ್ಞಾನ ಮುಂದುವರಿದಂತೆ ನೀವು ಕುಳಿತಲ್ಲಿಯೇ ಅದರ ಲಾಭ ಪಡೆಯಬಹುದು. ಇದು ಪ್ರಯೋಜನದಂತೆಯೇ ಕೆಲವು ಅಪಾಯಗಳನ್ನು ಉಂಟು ಮಾಡಬಹುದು. ಹೀಗಾಗಿ, ನೀವು ಎಚ್ಚರಿಕೆಯಿಂದ ಈ ಆಪ್‌ಗಳನ್ನು ಬಳಸಬೇಕಾಗುತ್ತದೆ. ನೀವು ಸಹ ಒಮ್ಮೆ ವಾಟ್ಸಾಪ್ ಮೂಲಕವೂ ಉಬರ್ ಕ್ಯಾಬ್ ಬುಕ್ ಮಾಡಿ. ಇದರ ಅನುಭವದ ಬಗ್ಗೆ ನಿಮ್ಮ ಆಪ್ತರ ಬಳಿ ಹಂಚಿಕೊಳ್ಳಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries