ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿಯುತ್ತಿದ್ದು, ಮೇ 31 ರಿಂದ ಜೂನ್ 1 ರವರೆಗೆ ಕೇರಳದಲ್ಲಿ ಗುಡುಗು ಸಹಿತ ಬಿರುಸಿನ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ನೆರೆಪೀಡಿತ ಪ್ರದೇಶದಲ್ಲಿರುವ ಹಲವಾರು ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಹೊಸದುರ್ಗದಲ್ಲಿ 12 ಹಾಗೂ ಕಾಸರಗೋಡಿನ 28ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಹಾನಿಗೀಡಾಗಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಶೂಕ್ರವಾರ ಭೇಟಿ ನೀಡಿ ಅಟಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ನೆರೆಪೀಡಿತ ಪ್ರದೇಶಗಳಲ್ಲಿ ವಿಪತ್ತು ನಿವಾರಣಾ ತಂಡ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.
ಚೆರ್ಕಳ ಮೇಲ್ಸೇತುವೆಯಿಂದ ತೊಡಗಿ ತೆಕ್ಕಿಲ್, ಮೇಲ್ಪರಂಬ ಪೆÇಲೀಸ್ ಠಾಣೆ ಸುತ್ತಮುತ್ತಲಿನ ಪ್ರದೇಶ, ಕಾಸರಗೋಡು-ಕಾಞಂಗಾಡ್ ರಾಜ್ಯ ಹೆದ್ದಾರಿಯ ಪಿಲಿಕುಂಜೆಯ ಭೂಕುಸಿತ ಪ್ರದೇಶ, ಮಧೂರಿನ ನೆರೆಪೀಡಿತ ಪ್ರದೇಶ, ಬಂದ್ಯೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಪ್ರದೇಶ, ಉಪ್ಪಳ ಗೇಟ್ ಮತ್ತು ಹೊಸಂಗಡಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಶುಕ್ರವಾರ ಭೇಟಿ ನೀಡಿದರು. ಶಾಸಕ ಎ.ಕೆ. ಎಂ. ಅಶ್ರಫ್, ತಹಶೀಲ್ದಾರ್‍ಗಳು, ಪೆÇಲೀಸ್, ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪನಿ ಪ್ರತಿನಿಧಿಗಳು ಜತೆಗಿದ್ದರು.
ಚೆರ್ಕಳದಲ್ಲಿ ಭೂಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಭೇಟಿ ನೀಡಿದರು.
ಚೆರ್ಕಳ ಪೇಟೆಯಲ್ಲಿ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಲಾರಿ ಚಕ್ರ ಕೆಸರುತುಂಬಿದ ಹೊಂಡದಲ್ಲಿ ಸಿಲುಕಿಕೊಂಡಿತು.







