ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಲ್ಲಿ ದೃಢಕಲಶ ಸಮಾರಂಭ ಗುರುವಾರ ನೆರವೇರಿತು. ದೇವಸ್ಥಾನ ತಂತ್ರಿವರ್ಯ ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ್ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಸಪ್ತಶುದ್ಧಿ, ರಕ್ಷೋಘ್ನ ಹೋಮ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಪವಿತ್ರಪಾಣಿ ರತನ್‍ಕುಮಾರ್ ಕಾಮಡ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ದೇವಸ್ಥಾನ ಸಮಿತಿ 109ಕಲಶಾಭಿಷೇಕದೊಂದಿಗೆ ದೃಢಕಲಶ ನೆರವೇರಿತು. ದೇವಸ್ತಾನದಲ್ಲಿ ಮಾ. 27ರಿಂದ ಏ. 7ರ ವರೆಗೆ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮಹಾಗಣಪತಿಗೆ ಮೂಡಪ್ಪ ಸೇವೆ ನೆರವೇರಿತ್ತು.
ಸೈನಿಕರಿಗಾಗಿ ಪ್ರಾರ್ಥನೆ:
ದೇಶ ಕಾಯುವ ಸೈನಿಕರ ಕ್ಷೇಮಕ್ಕಾಗಿ ದ್ರಢಕಲಶ ಸಮಾರಂಭದಲ್ಲಿ ಪ್ರಾರ್ಥಿಸಲಾಯಿತು. ದೇಶ, ಕೋಶವನ್ನು, ಸೈನಿಕರನ್ನು ವಿಘ್ನಗಳಿಂದ ಪಾರುಮಾಡಬೇಕು. ಸದಾ ದೇಶಕ್ಕಾಗಿ ಹಗಲಿರುಳು ತಮ್ಮ ಸೇವೆ ಮುಡಿಪಾಗಿರಿಸಿರುವ ಯೋಧರಿಗೆ ಶ್ರೀ ದೇವರು ನಿತ್ಯ ಸನ್ಮಂಗಲ ಉಂಟುಮಡಲಿ ಎಂದು ಪ್ರಾರ್ಥಿಸಲಾಯಿತು.







