ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ಪ್ರತೀಕ್ಷಾ(19)ಎಂಬಾಕೆ ಕಾಸರಗೋಡಿನ ನ್ಯಾಯಾಲಯಕ್ಕೆ ಹಾಜರಾಗಿದ್ದು, ಅಲ್ಲಿಂದ ಆಕೆ ಪ್ರಿಯತಮ, ಕಾಞಂಗಾಡು ನಿವಾಸಿ ಆಶಿಕ್‍ಆಲಿ ಜತೆ ತೆರಳಿದ್ದಾಳೆ.
ಕಳೆದ ಮಂಗಳವಾರ ಪ್ರತೀಕ್ಷಾ ನೆರೆಮೆನೆಗ ತೆರಳುವುದಾಗಿ ತಿಳಿಸಿ, ಹೊರಟವಳು ಸಂಜೆಯಾದರೂ ವಾಪಸಾಗದ ಹಿನ್ನೆಲೆಯಲ್ಲಿತಾಯಿಯ ಸಹೋದರ ಬದಿಯಡ್ಕ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ದೂರು ದಾಖಲಿಸುತ್ತಿದ್ದಂತೆ ಪ್ರತೀಕ್ಷಾ ಹಾಗೂ ಆಕೆಯ ಪ್ರಿಯತಮ ಆಶಿಕ್‍ಆಲಿ ಕಾಸರಗೋಡು ನಗರ ಠಾಣೆಯಲ್ಲಿ ಹಾಜರಾಗಿದ್ದರು. ಅಲ್ಲಿಗೆ ತೆರಳಿದ ಬದಿಯಡ್ಕ ಠಾಣೆ ಪೊಲೀಸರು ಇವರಿಂದ ಹೇಳಿಕೆ ದಾಖಲಿಸಿಕೊಂಡು ಇಬ್ಬರನ್ನೂ ಕಾಸರಗೋಡಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ತಮ್ಮ ಇಚ್ಛೆ ಪ್ರಕಾರ ನಡೆದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತೀಕ್ಷಾ ಆಶಿಕ್‍ಆಲಿ ಜತೆ ತೆರಳಿದ್ದಾಳೆ. ಈ ಮಧ್ಯೆ ನ್ಯಾಯಾಲಯಕ್ಕೆ ತಲುಪಿದ್ದ ಪ್ರತೀಕ್ಷಾ ತಾಯಿ ಹಾಗೂ ಸಹೋದರ ಪ್ರತೀಕ್ಷಾಳನ್ನು ಭೇಟಿಯಾದ ಸಂದರ್ಭ ಅವರೊಂದಿಗೆ ತೆರಳದಿರಲು ತೀರ್ಮಾನಿಸಿದ ಈಕೆ ಆಶಿಕ್‍ಆಲಿ ಜತೆ ತೆರಳಿದ್ದಾಳೆ.




