ಕಾಸರಗೋಡು: ವಾಟ್ಸಪ್ ಗ್ರೂಪ್ ಮೂಲಕ ಮತೀಯಸಾಮರಸ್ಯಕ್ಕೆ ಧಕ್ಕೆಯುಂಟುಮಾಡುವ ರೀತಿಯ ಸಂದೇಶ ರವಾನಿಸುತ್ತಿದ್ದ ಮಂಜೇಶ್ವರ ಕುಂಜತ್ತೂರು ನಿವಾಸಿ, ಪ್ರಸಕ್ತ ಕಾಸರಗೋಡು ಚೌಕಿ ಕಾರೋಟ್ ಶಾಲೆ ಬಳಿ ವಆಸಿಸುತ್ತಿರುವ ಅಬ್ದುಲ್ ಲತೀಫ್ ಎಂಬತನನ್ನು ಕಾಸರಗೋಡು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲ ಪೊಲೀಸ್ ವರಿಷ್ಠಾಧಿಕರಿ ಬಿ. ವಿಜಯಭರತ್ ರೆಡ್ಡಿ ನಿರ್ದೇಶ ಪ್ರಕಾರ ಕಾಸರಗೋಡು ಕ್ರೈಂ ಪೊಲೀಸ್ ಠಾಣೆ ಪ್ರಭಾರ ಇನ್ಸ್‍ಪೆಕ್ಟರ್ ನಳಿನಾಕ್ಷನ್ ಪಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಈತ ವಾಟ್ಸ್‍ಅಪ್ ಮೂಲಕ ಮತೀಯ ಸಾಮರಸ್ಯ ಹದಗೆಡಿಸುವ ರೀತಿಯ ಸಂದೇಶ ರವಾನಿಸುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.




