ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಪ್ರತಿಷ್ಠಾ ದಿನ ಉತ್ಸವ ಮೇ.28 ರಂದು ಬುಧವಾರ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಕಾರ್ಮಿಕತ್ವದಲ್ಲಿ ನೆರವೇರಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 7ಕ್ಕೆ ಗಣಹೋಮ, 9ಕ್ಕೆ 25 ಕಲಶ, 11.30ಕ್ಕೆ ಮಹಾಪೂಜೆ, 12ಕ್ಕೆ ಶ್ರೀ ದೇವರ ಬಲಿ ಹೊರಟು ರಾಜಾಂಗಣದಲ್ಲಿ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ಭೋಜನ ನಡೆಯಲಿದೆ. ರಾತ್ರಿ 07.30ಕ್ಕೆ ಶ್ರೀರಂಗಪೂಜೆ ನಡೆಯಲಿದೆ. ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಶ್ರೀಮುಡಿ ಗಂಧಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ದೇವಾಲಯದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.




.jpg)
