HEALTH TIPS

ಶೇ.30 ಆಯಸ್ಸು ಹೆಚ್ಚಿಸುವ ಔಷಧ ಪ್ರಯೋಗ ಯಶಸ್ವಿ! ಇಲಿಗಳ ಮೇಲೆ ಜರ್ಮನಿ ವಿಜ್ಞಾನಿಗಳ ಪ್ರಯೋಗ

ಬರ್ಲಿನ್‌: ಜೀವಿಗಳ ಆಯಸ್ಸು ಹೆಚ್ಚಿಸುವ ಕುರಿತಾದ ಜೀವವಿಜ್ಞಾನಿಗಳ ಪ್ರಯೋಗಕ್ಕೆ ಪ್ರಾರಂಭಿಕ ಯಶಸ್ಸು ದೊರೆತಿದ್ದು, ಜರ್ಮನಿಯ ವಿಜ್ಞಾನಿಗಳು ಇಲಿಗಳ ಜೀವಿತಾವಧಿಯನ್ನು ಶೇ.30ರಷ್ಟು ವಿಸ್ತರಿಸುವ ಪ್ರಯೋಗದಲ್ಲಿ ಯಶ ಕಂಡಿದ್ದಾರೆ ಎಂದು ವರದಿಯಾಗಿದೆ. ಮಾನವರ ಮೇಲೂ ಪ್ರಯೋಗದ ಚಿಂತನೆ ಇದೆ ಎನ್ನಲಾಗಿದೆ.

ಮ್ಯಾಕ್ಸ್‌ ಪ್ಲಾಂಕ್‌ ಇನ್ಸ್ಟಿಟ್ಯೂಟ್‌ ಫಾರ್‌ ಬಯಾಲಜಿ ಆಫ್ ಏಜಿಂಗ್‌ನ ಜೀವವಿಜ್ಞಾನಿಗಳ ತಂಡ ಎಫ್ಡಿಎ ಪ್ರಮಾಣಿತ ಔಷಧಗಳಾದ ರಾಪಾಮೈಸಿನ್‌ (ಅಂಗಾಂಶ ಕಸಿಯಲ್ಲಿ ಬಳಕೆಯಾಗುವ ಔಷಧ) ಹಾಗೂ ಟ್ರಾಮೆಟಿನಿಬ್‌ (ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧ) ಸಂಯೋಜನೆ ಬಳಸಿ ಈ ಪ್ರಯೋಗ ನಡೆಸಿವೆ. ಆಯಸ್ಸು ವಿಸ್ತರಣೆ ಜತೆಗೆ ಚಿಕಿತ್ಸೆ ನೀಡಿದಂತಹ ಇಲಿಗಳಲ್ಲಿ ಕಡಿಮೆ ಉರಿಯೂತ, ಕ್ಯಾನ್ಸರ್‌ ಗೆಡ್ಡೆಗಳ ನಿಧಾನಗತಿ ಬೆಳವಣಿಗೆ, ಉತ್ತಮ ದೈಹಿಕ ಕಾರ್ಯಕ್ಷಮತೆ ಸೇರಿದಂತೆ ಸುಧಾರಿತ ಆರೋಗ್ಯ ಸೂಚಕಗಳು ಕಂಡುಬಂದಿವೆ.

ಈ ಔಷಧಗಳನ್ನು ಪ್ರತ್ಯೇಕವಾಗಿ ಅಥವಾ ಸಂಯೋಜಿತವಾಗಿ ವಿಭಿನ್ನ ಪ್ರಮಾಣಗಳಲ್ಲಿ ಬಳಸುವುದರಿಂದ ಇಲಿಗಳ ಜೀವಕೋಶದಲ್ಲಿನ ವಂಶವಾಹಿಗಳ ಚಟುವಟಿಕೆಗಳಲ್ಲಿಯೂ ವಿಭಿನ್ನತೆಯನ್ನು ಕಂಡುಕೊಳ್ಳಲಾಗಿದೆ.

ಆದಾಗ್ಯೂ ಮಾನವರ ಮೇಲಿನ ಪ್ರಯೋಗಕ್ಕೂ ಮುನ್ನ ಸೂಕ್ತ ಡೋಸ್‌ ಹಾಗೂ ಸಂಭಾವ್ಯ ದುಷ್ಪರಿಣಾಮಗಳನ್ನು ತಪ್ಪಿಸಲು ಇನ್ನೂ ಸಾಕಷ್ಟು ಅಧ್ಯಯನ ಹಾಗೂ ಕ್ಲಿನಿಕಲ್‌ ಪ್ರಯೋಗಗಳು ನಡೆಯಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries