ಕಾಸರಗೋಡು: ಆರೋಗ್ಯ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರವು ಕೇರಳದಲ್ಲಿ ನಡೆಯುತ್ತಿರುವ ಐಸಿಎಂಆರ್ ಸಂಶೋಧನೆಗಾಗಿ ಯೋಜನಾ ನರ್ಸ್‍ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಿದ್ದು, ಸಂದರ್ಶನ ಆಯೋಜಿಸಿದೆ.
ಮೂರು ವರ್ಷಗಳ ದ್ವಿತೀಯ ದರ್ಜೆ ಜಿಎನ್‍ಎಂ, ಬಿಎಸ್ಸಿಯೊಂದಿಗೆ ಪಬ್ಲಿಕ್ ಹೆಲ್ತ್ ರಿಸರ್ಚ್ ಹಾಗೂ ಈ ಉದ್ಯೋಗದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ವಯಸ್ಸಿನ ಮಿತಿ 30 ವರ್ಷಗಳಾಗಿದ್ದು, ಮೇ 8 ರಂದು ಬೆಳಗ್ಗೆ 11ಕ್ಕೆ ತೈಕ್ಕಾಡಿನಲ್ಲಿರುವ ಸಿಸ್ಟಮ್ಸ್ ರಿಸೋರ್ಸ್ ಸೆಂಟರ್ ಕೇರಳದಲ್ಲಿ ನಡೆಯುವ ಸಂದರ್ಶನಕ್ಕೆ ಖುದ್ದಾಗಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ www.shsrc.kerala.gov.in ವೆಬ್‍ಸೈಟ್ ಸಂದರ್ಶಿಸುವಂತೆ ಪ್ರಕಟನೆ ತಿಳಿಸಿದೆ.




