ಕಾಸರಗೋಡು: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿಗೆ ಒಂದು ಕೋಟಿ ರೂ. ಪರಿಹಾರ ಧನ ಮಂಜೂರುಗೊಳಿಸುವಂತೆ ಕಾಸರಗೋಡು ಮೋಟಾರು ಆಕ್ಸಿಡೆಂಟ್ ಕ್ಲೈಮ್ ಟ್ರಿಬ್ಯೂನಲ್ ತೀರ್ಪು ನೀಡಿದೆ.
ಪ್ಲಸ್‍ವನ್ ವಿದ್ಯಾರ್ಥಿ, ಚೆಮ್ನಾಡ್ ಗ್ರಾಪಂ ವ್ಯಾಪ್ತಿಯ ವಳಪೋತ್ ತಾನಂಪುರಕ್ಕಲ್ ವೀಡಿನ ಸುಕುಮಾರ್-ಪ್ರೇಮಾ ದಂಪತಿ ಪುತ್ರ ಅಭಿಜಿತ್(17)ಎಂಬಾತಗೆ ಕೋಮಲ್ ಸುಂದರಂ ಜನರಲ್ ಇನ್ಶ್ಯೂರೆನ್ಸ್ ಕಂಪೆನಿ ಈ ಮೊತ್ತ ನೀಡಬೇಕಾಗಿದೆ. ಚೆಮ್ನಾಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಯಾಗಿರುವ ಅಭಿಜಿತ್‍ಗೆ 2023 ಏ. 23ರಂದು ಶಾಲೆಗೆ ನಡೆದುಹೋಗುವ ಮಧ್ಯೆ ಪರವನಡ್ಕದಲ್ಲಿ ಅತಿಯಾದ ವೇಗದಲ್ಲಿ ಆಗಮಿಸಿದ ಪಿಕ್‍ಅಪ್ ಡಿಕ್ಕಿಯಾಗಿತ್ತು. ಅಪಘಾತದಿಂದ ಗಂಭೀರಗಾಯಗೊಂಡಿದ್ದ ಅಭಿಜಿತ್ 10 ತಿಂಗಳ ಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದನು.




