ಕಾಸರಗೋಡು: ಆಹಾರ ವಿತರಣೆಗಿರುವ ತಡೆ ನಿವಾರಿಸಿಕೊಳ್ಳುವುದರ ಜತೆಗೆ ವಿತರಣಾ ವ್ಯವಸ್ಥೆಯನ್ನು ಶೇ. ನೂರರಷ್ಟಾಗುವಂತೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಜಿ.ಆರ್. ಅನಿಲ್ ಹೇಳಿದರು. ಅವರು ಕಾಸರಗೋಡು ಅತಿಥಿ ಗೃಹದಲ್ಲಿ ನಡೆದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಶೇ.85 ರಷ್ಟು ಮಂದಿ ಗ್ರಾಹಕರು ಬಿಪಿಎಲ್ ಕಾರ್ಡುದಾರರು ಈ ತಿಂಗಳ ಪಡಿತರ ಖರೀದಿಸಿದ್ದು, ಮುಂದಿನ ತಿಂಗಳ ವಿತರಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಮಲೆನಾಡು ಪ್ರದೇಶಗಳಲ್ಲಿಯೂ ಕೆ.ಸ್ಟಾಲ್ ಅಂಗಡಿಗಳ ಕಾರ್ಯಾಚರಣೆಗಳನ್ನು ಬಲಪಡಿಸಲು ಸಾಧ್ಯವಾಗಬೇಕು. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡು ಪ್ರದೇಶಗಳಲ್ಲಿನ ಪರಿಶಿಷ್ಟ ಜಾತಿಗೆ ಸೇರಿದ ಜನರು ಮತ್ತು ಕರಾವಳಿ ಪ್ರದೇಶದ ನಿವಾಸಿಗಳಿಗೆ ಆಹಾರ ಪದಾರ್ಥಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಒಂದು ಕುಟುಂಬಕ್ಕೂ ಆಹಾರ ಪದಾರ್ಥ ಲಭ್ಯವಾಗದ ಸ್ಥಿತಿ ನಿರ್ಮಾಣವಾಗಬಾರದು. ಹೆಚ್ಚಿನ ಸಮಸ್ಯೆ ಎದುರಿಸುತ್ತಿರುವ ಪಡಿತರ ಅಂಗಡಿಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಪ್ಲೈಕೋ 13 ರೀತಿಯ ಉತ್ಪನ್ನಗಳನ್ನು ಗ್ರಾಮೀಣ ಪ್ರದೇಶ ಸೇರಿದಮತೆ ತನ್ನ ಎಲ್ಲಾ ಮಳಿಗೆಗಳಿಗೆ ಪೂರೈಕೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕೋಯಿಕ್ಕೋಡ್ ಪ್ರಾದೇಶಿಕ ಸರಬರಾಜು ಕಂಪನಿಯ ವ್ಯವಸ್ಥಾಪಕಿ ಶೆಲ್ಜಿ ಜಾರ್ಜ್, ಕಾಸರಗೋಡು ಜಿಲ್ಲಾ ಸರಬರಾಜು ಕಚೇರಿಯ ಹಿರಿಯ ಅಧೀಕ್ಷಕಿ ಆನ್ಸಿ ಐಸಾಕ್, ತಾಲ್ಲೂಕು ಸರಬರಾಜು ಅಧಿಕಾರಿಗಳಾದ ಮಾಧವನ್ ಪಾಟಿ, ಬಿ. ಕೃಷ್ಣ ನಾಯ್ಕ್, ಕಾಸರಗೋಡು ಸಪ್ಲೈಕೋ ಡಿಪೆÇೀ ಸಹಾಯಕ ವ್ಯವಸ್ಥಾಪಕ ಎಂ.ರವೀಂದ್ರನ್, ಕಾಞಂಗಾಡ್ ಸಪ್ಲೈಕೋ ಡಿಪೆÇೀ ಸಹಾಯಕ ವ್ಯವಸ್ಥಾಪಕ ಬಾಲಕೃಷ್ಣನ್ ಮತ್ತಿತರರು ಭಾಗವಹಿಸಿದ್ದರು.





