HEALTH TIPS

ಹಠಾತ್ ಮಳೆಗೆ ಬೆಳೆ ಹಾನಿ ಆಗಿಲ್ಲ: ಕೇಂದ್ರ ಕೃಷಿ ಇಲಾಖೆ

ನವದೆಹಲಿ: 'ದೇಶದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಪ್ರಮುಖ ಬೆಳೆಗಳಿಗೆ ಹಾನಿಯಾಗಿಲ್ಲ. ಈ ಮಳೆಯು ಬೇಸಿಗೆಯ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ' ಎಂದು ಕೇಂದ್ರ ಕೃಷಿ ಇಲಾಖೆಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಹೇಳಿದ್ದಾರೆ.

ಈ ಹಠಾತ್ ಮಳೆಯಿಂದ ಇಲ್ಲಿಯವರೆಗೆ ಯಾವುದೇ ಹಾನಿ ವರದಿಯಾಗಿಲ್ಲ.

ಅಲ್ಲದೇ, ಈ ಮಳೆ ಹೆಸರುಕಾಳು, ಜೋಳ ಮತ್ತು ಭತ್ತದ ಬೆಳೆಗಳಿಗೆ ಅನುಕೂಲವಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಸುರಿದ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ಮಾವು ಮತ್ತು ಲಿಚಿ ಹಣ್ಣುಗಳು ಉದುರಿವೆ. ಆದರೆ, ಆಯಾ ರಾಜ್ಯ ಸರ್ಕಾರಗಳು ಈ ಕುರಿತು ಸಚಿವಾಲಯಕ್ಕೆ ವರದಿ ಸಲ್ಲಿಸಿಲ್ಲ ಎಂದರು.

ಜುಲೈನಿಂದ ಪ್ರಾರಂಭವಾಗುವ ಭತ್ತದ ಬಿತ್ತನೆಯ ಸಿದ್ಧತೆ ಪ್ರಗತಿಯಲ್ಲಿದೆ. 2024-25ನೇ ಬೆಳೆ ವರ್ಷದ (ಜುಲೈ-ಜೂನ್) ಮೂರನೇ ಆಹಾರ ಧಾನ್ಯ ಉತ್ಪಾದನಾ ಅಂದಾಜು ಮೂರ್ನಾಲ್ಕು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries