ಮಂಜೇಶ್ವರ : ಕಾಸರಗೋಡು ಜಿಲ್ಲಾ ಪಂಚಾಯತಿಯಿಂದ ಲಭಿಸಿದ 18 ಲಕ್ಷ ರೂ. ನಿಧಿಯಲ್ಲಿ ಮಂಜೇಶ್ವರದ ಚೌಕಿಯಿಂದ ಕಿಟ್ಟಂಗುಂಡಿ ತನಕ ಸುಮಾರು ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ 5200 ಚದರ ಮೀಟರ್ ನಷ್ಟು ಮರು ಡಾಮಾರೀಕರಣ ಹಾಗೂ 100 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
15 ಲಕ್ಷ ವೆಚ್ಚದಲ್ಲಿ ತರಾತುರಿಯಾಗಿ ನಿರ್ಮಿಸಿದ ರಸ್ತೆಯು ದಿನ ಕಳೆದಂತೆ ತನ್ನ ಗುಣಮಟ್ಟವನ್ನು ಕಳೆದುಕೊಂಡು ಮರು ಡಾಮಾರೀಕರಣ ನಡೆದು ನಿರ್ಮಾಣವಾದ ಕೇವಲ ಒಂದೂವರೆ ತಿಂಗಳಿಗೆ ಕಿತ್ತುಹೋಗಿ ಕಾಮಗಾರಿಯ ಗುಣಮಟ್ಟಕ್ಕೆ ಕನ್ನಡಿ ಹಿಡಿದಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ 6 ತಿಂಗಳಾಗುವ ಮೊದಲೇ ಕಿತ್ತುಹೋಗುತ್ತಿರುವುದರಿಂದ ಇದೊಂದು ಕಳಪೆ ಕಾಮಗಾರಿ ಎಂದು ರಸ್ತೆಯೇ ಸಾಕ್ಷಿ ನುಡಿಯುತ್ತಿದೆ. ರಸ್ತೆಯನ್ನು ಗಮನಿಸಿದಾಗ ಕಳಪೆ ಎಂಬುದು ಸಾಮಾನ್ಯ ನೋಟದಲ್ಲೇ ಗುರುತಿಸಬಹುದು ಎಂದು ಸ್ಥಳೀಯರು ಹೇಳುತಿದ್ದಾರೆ.
ಕಾಮಗಾರಿಗೆ ಸಂಬಂಧಿಸಿದಂತೆ ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೊಳಪಡಿಸಬೇಕು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಭಿಮತ:
ಈ ಬಗ್ಗೆ ಪ್ರತಿಕ್ರಿಯಿಸಿದ ಗುತ್ತಿಗೆದಾರ ಕಾಂಕ್ರೀಟ್ ರಸ್ತೆಯ ಮೇಲ್ಪಾಗದ ಲೇಯರ್ ಹೋಗುದು ಸರ್ವಸಾಮಾನ್ಯ. ಇದನ್ನು ಹೊರತು ಪಡಿಸಿ ಒಂದೇ ಒಂದು ಕಲ್ಲು ಅಲ್ಲಿ ಅಲುಗಾಡಿಲ್ಲ. ಸಾಧ್ಯವಾದಷ್ಟು ಕಾಮಗಾರಿಗೆ ಅವಶ್ಯಕವಿದ್ದ ಎಲ್ಲಾ ಸಾಮಗ್ರಿಗಳನ್ನು ಉಪಯೋಗಿಸಿಕೊಂಡೇ ಇಂಜಿನಿಯರ್ ನ ನಿರ್ದೇಶನದಂತೆ ಕಾಮಗಾರಿ ಪೂರ್ತಿಕರಿಸಲಾಗಿದೆ ಎಂದು ಹೇಳಿದ್ದಾರೆ.
-ನಾಸಿರ್ ಇಡಿಯ.
ಗುತ್ತಿಗೆದಾರ.




.jpg)
