ಕುಂಬಳೆ: ಸ್ಥಳೀಯ ಪತ್ರಕರ್ತರ ಸಂಘ, ಪ್ರೆಸ್ ಪೋರಂ ಕುಂಬಳೆ ನೇತೃತ್ವದಲ್ಲಿ ಗುರುವಾರ ಕುಂಬಳೆ ಪ್ರೆಸ್ ಪೋರಂ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ನಡೆಯಿತು.
ಕೆಜೆಯು ನಿಕಟಪೂರ್ವ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಧ್ವಜಾರೋಹಣ ನಿರ್ವಹಿಸಿದರು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ನಿರಂತರ ಹೋರಾಟದ ಫಲವಾಗಿ ನ್ಯಾಯ ದೊರಕಿಸಿದ ದಿನವಾಗಿ ಕಾರ್ಮಿಕರಿಗೆ ಇಂದಿನ ದಿನ ಮಹತ್ವದ್ದಾಗಿದೆ. ಸಂಘಟಿತ ಪ್ರಯತ್ನ, ಅನ್ಯಾಯದ ವಿರುದ್ಧ ಒಗ್ಗೂಡಿದ ಧ್ವನಿಗೆ ಲಭಿಸಿದ ಈ ಹಕ್ಕುಗಳಿಗೆ ಪ್ರತಿಯೊಬ್ಬ ನಾಗರಿಕನೂ ಆಭಾರಿಯಾಗಿರಬೇಕು. ಸ್ಥಳೀಯ ಪತ್ರಕರ್ತರ ಹಕ್ಕು ಸಂರಕ್ಷಣೆಗೆ ಸರ್ಕಾರ ಬದ್ಧವಾಗಿರಬೇಕು ಎಂದವರು ತಿಳಿಸಿದರು.
ಫ್ರೆಸ್ ಪೋರಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನಾರೋಗ್ಯಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಅಬೋಧಾವಸ್ಥೆಯಲ್ಲಿರುವ ಪತ್ರಕರ್ತ ಧನರಾಜ್ ಉಪ್ಪಳ ಅವರ ಚಿಕಿತ್ಸಾ ನೆರವಿಗೆ ಸಾಧ್ಯವಿದ್ದಷ್ಟು ಕೈಜೋಡಿಸುವುದು ಕಾರ್ಮಿಕ ದಿನಕ್ಕೆ ನಾವು ಸಲ್ಲಿಸುವ ಕೊಡುಗೆಯಾಗಿದೆ. ಅಸಂಘಟಿತ ವಲಯದ ಸ್ಥಳೀಯ ಪತ್ರಕರ್ತರ ದುರಿತಗಳಿಗೆ ಪರಿಹಾರ ಒದಗಿಸುವಲ್ಲಿ ಇನ್ನೂ ಮಾಧ್ಯಮ ಕ್ಷೇತ್ರ ಸಶಸಕ್ತವಾಗಿಲ್ಲ ಮತ್ತು ಬೆಂಬಲ ಲಭಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಫ್ರೆಸ್ ಪೋರಂ ಅಧ್ಯಕ್ಷ ಕೆ.ಎಂ.ಎ.ಸತ್ತಾರ್, ಐ.ಮುಹ್ಮದ್ ರಫೀಕ್, ಭಾಗ್ಯಶ್ರೀ ಶಿರಂತ್ತಡ್ಕ, ಅಶ್ರಫ್ ಸ್ಕೈಲರ್ ಮೊದಲಾದವರು ಉಪಸ್ಥಿತರಿದ್ದರು.0




.jpg)

