ಕಾಸರಗೋಡು: ಸಿವಿಲ್ ಸ್ಟೇಷನ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ಮತ್ತು ಕಲೆಕ್ಟರೇಟ್ ಗೆ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರಯೋಜನಪ್ರದವಾಗಿದ್ದ ಕ್ಯಾಂಟೀನ್ ಕಳೆದ ಕೆಲವು ದಿನಗಳಿಂದ ಮುಚ್ಚಲ್ಪಟ್ಟಿದ್ದು, ನೌಕರರು ಮತ್ತು ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿದ್ದು, ಕ್ಯಾಂಟೀನ್ ಕಾರ್ಯಾಚರನೆ ಪುನಾರಂಭಿಸುವಂತೆ ರಾಜ್ಯ ನೌಕರರ ಸಂಘ ಎಸ್.ಇ.ಯು ಸಭೆ ಆಗ್ರಹಿಸಿದೆ.
ನೌಕರರು ಮಧ್ಯಾಹ್ನದ ಊಟ ಮತ್ತು ತಿನಿಸಿಗಗಿ ಹೊರಗಿನ ಹೋಟೆಲ್‍ಗಳನ್ನು ಅವಲಂಬಿಸಬೇಕಾಗಿರುವುದರಿಂದ ಹೆಚ್ಚುಹಣ ತೆರಬೇಕಾಗಿರುವುದರ ಜತೆಗೆ ಸಮಯವೂ ವ್ಯರ್ಥವಾಗುತ್ತಿದೆ. ತಕ್ಷಣ ಕ್ಯಾಂಟೀನ್ ಕಾರ್ಯಾಚರಣೆ ಪುನಾರಂಭಿಸುವಂತೆ ಸಂಘಟನೆ ಒತ್ತಾಯಿಸಿದ್ದು, ಈ ಬಗ್ಗೆ ಸಂಘಟನೆ ಕಾಸರಗೋಡು ತಾಲೂಕು ಸಮಿತಿಯು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಸಂಘಟನೆ ರಾಜ್ಯ ಕಾರ್ಯದರ್ಶಿ ಓ.ಎಂ. ಶೆಫೀಕ್ ಸಮಾರಂಭ ಉದ್ಘಾಟಿಸಿದರು.ತಾಲೂಕು ಸಮಿತಿ ಅಧ್ಯಕ್ಷ ಹಸೈನಾರ್ ಹಿದಾಯತ್ ನಗರ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪರಿಷತ್ ಸದಸ್ಯ ನೌಫಲ್ ನೆಕ್ರಾಜೆ, ಅಶ್ರಫ್ ಚೆರ್ಕಳ, ಅಬ್ದುಲ್ ಅಜೀಜ್ ಪಿ.ಎ, ಆಸಿಫ್ ವಡಕರ, ಯೂನಸ್ ಎನ್, ಸರ್ಫರಾಜ್, ನವೀದ್ ಮೊದಲದವರು ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ಮುಹಮ್ಮದಾಲಿ ಕೆ.ಕೆ. ಸ್ವಾಗತಿಸಿದರು. ಕೋಶಾಧಿಕಾರಿ ಜಮ್ಶಾದ್ ಚೆಮ್ನಾಡ್ ವಂದಿಸಿದರು.
-------------------------------------




