ಕಾಸರಗೋಡು: ಹದಿನಾರರ ಹರೆಯದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೀರ್ಚಾಲು ಕಡಂಬಳ ನಿವಾಸಿ ಮಹಮ್ಮದ್ ರಿಫಾಯಿ, ನೆಕ್ರಾಜೆ ನಿವಾಸಿ ರಮೇಶನ್, ಚೆಂಗಳ ನಿವಾಸಿ ಮನೋಜ್ ಬಂಧಿತರು. ಇನ್ನೊಬ್ಬ ಆರೋಪಿ ಸಂದೇಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕಿಯನ್ನು ಈತ ಕರೆದೊಯ್ದು ದೌರ್ಜನ್ಯವಸೆಗಿರುವುದಲ್ಲದೆ, ಇತರರಿಗೂ ಒಪ್ಪಿಸಿರುವುದಾಗಿ ದೂರಲಾಗಿದೆ.





