ಶ್ರೀನಗರ: 'ಆಪರೇಷನ್ ಸಿಂಧೂರ' ಬಳಿಕ ಗಡಿ ನಿಯಂತ್ರಣ ರೇಖೆಯಾದ್ಯಂತ ಗುಂಡಿನ ಚಕಮಕಿ ನಡೆದ ಕಾರಣ ಕಾಶ್ಮೀರ ಗಡಿಭಾಗದಲ್ಲಿನ ನಿವಾಸಿಗಳು ರಾತ್ರಿ ಇಡೀ ಆತಂಕದಿಂದ ನಿದ್ದೆ ಮಾಡಲಿಲ್ಲ.
ಉತ್ತರ ಕಾಶ್ಮೀರದ ಕುಪ್ವಾಡ ಜಿಲ್ಲೆಯ ಕರ್ನಾಹ್ ಮತ್ತು ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಸೇನೆಯು ತೀವ್ರ ಶೆಲ್ ದಾಳಿ ನಡೆಸಿದೆ.
ಭಾರತವು ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ದಾಳಿಯಿಂದ ತಪ್ಪಿಸಿಕೊಳ್ಳಲು ಕುಪ್ವಾಡ ಜಿಲ್ಲೆಯಲ್ಲಿ ಜನರು ಭೂಗತ ಬಂಕರ್‌ಗಳಲ್ಲಿ ಆಶ್ರಯ ಪಡೆದರು. ಉರಿಯಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡರು.
ಶ್ರೀನಗರದಲ್ಲಿಯೂ ಜನರು ಮಧ್ಯರಾತ್ರಿಯಿಂದಲೇ ಟಿ.ವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ನೋಡುತ್ತಾ ಆತಂಕಗೊಂಡಿದ್ದರು.




