HEALTH TIPS

ಪಾಕ್ ಪರ ಬೇಹುಗಾರಿಕೆ ಆರೋಪ: ಜ್ಯೋತಿ ಮಲ್ಹೋತ್ರಾಳ ಮತ್ತೊಂದು ಕರಾಳ ಮುಖ ಬಯಲಿಗೆ!

ಮುಂಬಯಿ: ಪಾಕ್ ಪರ ಬೇಹುಗಾರಿಕೆ ಆರೋಪದ ಅಡಿ ಹರಿಯಾಣ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರು ಮತ್ತೊಂದು ಮುಖವಾಡ ಕಳಚಿದೆ.

ಜ್ಯೋತಿ ಪಹಲ್ಗಾಮ್ ಘಟನೆಗೂ ಮೊದಲು ಲಾಹೋರ್‌ಗೆ ಹೋಗಿದ್ದಾಗ ಅಲ್ಲಿನ ಅನಾರ್ಕಲಿ ಬಜಾರ್‌ಗೆ ಹೋಗಿದ್ದಾಗ ಅವರಿಗೆ ಆರು ಜನ ಎ.ಕೆ 47 ರೈಫಲ್ ಹಿಡಿದುಕೊಂಡು ಬೆಂಗಾವಲಾಗಿದ್ದರು.

ಈ ವಿಡಿಯೊ ಇದೀಗ ಬಯಲಿಗೆ ಬಂದಿದ್ದು ಸ್ಕಾಟಿಶ್ ಯೂಟ್ಯೂಬರ್ ಕಲಮ್ ಮಿಲ್ ಎನ್ನುವರು ವಿಡಿಯೊ ಹಂಚಿಕೊಂಡಾಗ ಜ್ಯೋತಿ ಮಲ್ಹೋತ್ರಾ ಕರಾಳ ಮುಖ ಬಯಲಿಗೆ ಬಂದಿದೆ.

ಸ್ಕಾಟ್‌ಲ್ಯಾಂಡ್‌ನಿಂದ ಬಂದಿದ್ದ ಕಲಮ್ ಮಿಲ್ ಅವರಿಗೆ ಅಂದು ಅನಾರ್ಕಲಿ ಬಜಾರ್‌ನಲ್ಲಿ ಜ್ಯೋತಿ ಮಲ್ಹೋತ್ರಾ ಎದುರಿಗೆ ಸಿಕ್ಕಿದ್ದರು. ಆ ವೇಳೆ ಇಬ್ಬರೂ ಸಹಜವಾಗಿ ಮಾತನಾಡಿದ್ದಾರೆ. ಆಗ ಜ್ಯೋತಿ ಸುತ್ತ ಎ.ಕೆ. 47 ರೈಫಲ್ ಹಿಡಿದುಕೊಂಡು ಆರು ಜನ ಬೆಂಗಾವಲಾಗಿದ್ದು ಕಂಡು ಬರುತ್ತದೆ. ಸದ್ಯ ಈ ವಿಡಿಯೊ ಇದೀಗ ಆನ್‌ಲೈನ್‌ಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.

ಎ.ಕೆ 47 ರೈಫಲ್ ಹಿಡಿದುಕೊಂಡವರು ಸಿವಿಲ್ ಡ್ರೆಸ್‌ನಲ್ಲಿದ್ದ ಪಾಕ್ ಸೇನೆ ಯೋಧರು ಎಂದೂ ಚರ್ಚೆಯಾಗುತ್ತಿದೆ.

ಪಾಕಿಸ್ತಾನದ ಪರ ಜ್ಯೋತಿ ಮಲ್ಹೋತ್ರಾ ಬೇಹುಗಾರಿಕೆ ಮಾಡುತ್ತಿದ್ದಾಳೆ ಎಂಬುದು ಪಹಲ್ಗಾಮ್ ದಾಳಿಯ ನಂತರ ಬಹಿರಂಗವಾಯಿತು. ಇದಕ್ಕೆ ಜ್ಯೋತಿ ಮಲ್ಹೋತ್ರಾಳ ಒಂದೊಂದು ವಿಡಿಯೊ ಸಹ ಸಾಕ್ಷ್ಮಿ ಹೇಳುತ್ತಿವೆ ಎಂದು ಹಲವರು ಜಾಲತಾಣಗಳಲ್ಲಿ ಆರೋಪಿಸಿದ್ದರು.

ಸದ್ಯ ಜ್ಯೋತಿ ಮಲ್ಹೋತ್ರಾ ಹರಿಯಾಣದ ಹಿಸ್ಸಾರ್ ಪೊಲೀಸರಿಂದ ತೀವ್ರ ವಿಚಾರಣೆಗೆ ಒಳಗಾಗಿದ್ದು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಪಾಕ್ ಪರ ಬೇಹುಗಾರಿಕೆ ಆರೋಪಕ್ಕೆ ಸಂಬಂಧಿಸಿ ಕಳೆದ ಎರಡು ವಾರಗಳಲ್ಲಿ ಜ್ಯೋತಿ ಸೇರಿದಂತೆ ಪಂಜಾಬ್‌, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಒಟ್ಟು 12 ಜನರನ್ನು ಬಂಧಿಸಲಾಗಿದೆ.

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಬೇಹುಗಾರಿಕೆ ಜಾಲವು ಉತ್ತರ ಭಾರತದಲ್ಲಿ ಇರುವ ಕುರಿತು ಹಾಗೂ ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಅಲ್ಲಿನ ಅಧಿಕಾರಗಳೊಂದಿಗೆ ಬಂಧಿತರು ಹಂಚಿಕೊಂಡಿರುವ ಬಗ್ಗೆ ತನಿಖಾಧಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸೇನೆ ಕುರಿತು ಜ್ಯೋತಿ ಅವರಿಗೆ ಮಾಹಿತಿ ಲಭ್ಯವಿತ್ತು ಎಂಬುದಕ್ಕೆ ಸದ್ಯ ಪುರಾವೆಗಳು ದೊರೆತಿಲ್ಲ. ಆದರೆ, ಪಾಕಿಸ್ತಾನದ ಗುಪ್ತಚರ ಸಂಸ್ಥೆಯಲ್ಲಿರುವವರು ಎಂದು ತಿಳಿದಿದ್ದರೂ ಕೆಲವರೊಂದಿಗೆ ಜ್ಯೋತಿ ಸಂಪರ್ಕದಲ್ಲಿದ್ದರು.

ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಭಾರತ - ಪಾಕಿಸ್ತಾನಗಳ ನಡುವಿನ ನಾಲ್ಕು ದಿನಗಳ ಸೇನಾ ಸಂಘರ್ಷದ ಸಮಯದಲ್ಲೂ ಜ್ಯೋತಿ ಅವರು ಡ್ಯಾನಿಶ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries