ಕಾಸರಗೋಡು: ಕಾಞಂಗಾಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗಾಗಿ ದಾಖಲಾಗಿದ್ದ ವಾಯಕ್ಕೋಡ್ ಶಿವಾಜಿ ನಗರ ನಿವಸಿ. ದಿ. ಮುಲ್ಲಚೇರಿ ಗೋಪಾಲನ್ ನಾಯರ್ ಮತ್ತು ನಾರಾಯಣಿ ದಂಪತಿಯ ಪುತ್ರಿ ಹಾಗೂ ಚಟ್ಟಂಚಾಲ್ ಕೋಳಿಯಡ್ಕದ ಉಣ್ಣಿಕೃಷ್ಣನ್ ಎಂ ಅವರ ಪತ್ನಿ ಸೀತಾಕುಮಾರಿ (42) ಮೃತಪಟ್ಟಿದ್ದಾರೆ.
ಸೀತಾಕುಮಾರಿ ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆದು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ಸೀತಾ ಕುಮಾರಿ ಅವರ ದೇಹವನ್ನು ಉನ್ನತ ಶವಮಹಜರಿಗಾಘಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಸೀತಾಕುಮಾರಿ ಅವರ ಸಂಬಂಧಿಕರ ದೂರಿನ ಮೇರೆಗೆ ಹೊಸದುರ್ಗ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





