ಕಾಸರಗೋಡು: ಹೊಸದುರ್ಗ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಎಣ್ಣಪ್ಪಾರ ಮೊಯೊಲಾಂ ಕಾಲನಿ ನಿವಾಸಿ ರಾಮನ್-ಕಲ್ಯಾಣಿ ದಂಪತಿ ಪುತ್ರಿ ರೇಶ್ಮಾ(20)ಳ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪಾಣತ್ತೂರು ಬಾಪ್ಪಂಗಯ ನಿವಾಸಿ, ನಿರ್ಮಾಣ ಗುತ್ತಿಗೆದಾರ ಬಿಜು ಪೌಲೋಸ್(40)ಎಂಬಾತನನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
2011ರ ಜನವರಿಯಲ್ಲಿ ರೇಶ್ಮಾ ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಬಗ್ಗೆ ತಂದೆ ನೀಡಿದ ದೂರಿನನ್ವಯ ಅಂಬಲತ್ತರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಸ್ಥಳೀಯ ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು ನಂತರ ಹೈಕೋರ್ಟು ಆದೇಶ ಪ್ರಕಾರ ಕ್ರೈಂ ಬ್ರಾಂಚ್‍ಗೆ ವಹಿಸಿಕೊಡಲಾಗಿತ್ತು. ಈ ಮಧ್ಯೆ ಹೊಳೆಯಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆಯಾಗಿದ್ದು, ಇದನ್ನು ನಂತರ ದಫನಗೈಯಲಾಗಿತ್ತು. ಕ್ರೈಂ ಬ್ರಾಂಚ್ ಪೊಲೀಸರು ಮೃತದೇಹ ಮೇಲಕ್ಕೆತ್ತಿ ಡಿಎನ್‍ಎ ತಪಾಸಣೆಗಾಗಿ ಲ್ಯಾಬ್‍ಗೆ ಕಳುಹಿಸಿಕೊಟ್ಟಿದ್ದು, ಇದರಲ್ಲಿ ಮೃತದೇಹ ರೇಶ್ಮಾಳದ್ದೆಂದು ಖಚಿತಗೊಂಡಿತ್ತು. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ವಯನಾಡಿನ ವರ್ಕ್‍ಶಾಪ್‍ನಿಂದ ಫೌಲೋಸ್‍ನನ್ನು ಬಂಧಿಸಿದ್ದಾರೆ. ಕ್ರೈಂ ಬ್ರಾಂಚ್ ಡಇವೈಎಸ್‍ಪಿ ಮಧುಸೂದನನ್ ನಾಯರ್, ಎಸ್.ಐ ರಘು ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.




