ಮಂಜೇಶ್ವರ: ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ತಂಡವು ಯಶಸ್ವಿಯಾಗಿ ನೂರು ತಾಳಮದ್ಧಳೆಯನ್ನು ಪ್ರಸ್ತುತಿಗೊಳಿಸಿದ ಸಂಭ್ರಮದಲ್ಲಿ ಯಕ್ಷಶತಕ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿತ್ತು. ಸಮಾರಂಭವನ್ನು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಜಿಬೈಲು ಕ್ಷೇತ್ರದ ಮೊಕ್ತೇಸರ ಗೋಪಾಲಕೃಷ್ಣ ನಾವಡ ಮಜಿಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು.
ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ, ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಅಧ್ಯಕ್ಷ ಗಣೇಶ ನಾವಡ ಮೀಯಪದವು, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಉಪಸ್ಥಿತರಿದ್ದು ಶುಭ ಹಾರೈಸಿದರು.
ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ಅಧ್ಯಕ್ಷ ಹರೀಶ ನಾವಡ ಮಜಿಬೈಲು ಉಪಸ್ಥಿತರಿದ್ದರು. ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರ್ವಹಿಸಿದರು. ಕೇಶವ ಪ್ರಸಾದ್ ಶಿರಂತಡ್ಕ ಪ್ರಾರ್ಥನೆ ನೆರವೇರಿಸಿದರು. ಯಕ್ಷಶತಕ ಉದ್ಘಾಟನೆ ಸಲುವಾಗಿ ವಿಕ್ರಂ ಮಯ್ಯ ಕೂಡ್ಲು ಹಾಗೂ ರಾಜಾರಾಮ ಬಲ್ಲಾಳ ಚಿಪ್ಪಾರು ಹಾಗೂ ಬಳಗದವರಿಂದ 'ಅಬ್ಬರ ತಾಳ' ಜರಗಿತು.




.jpg)
