ಬದಿಯಡ್ಕ: 2024-25 ನೇ ವರ್ಷದ ಕೇರಳ ಪ್ಲಸ್ ಟು ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹಯರ್ ಸೆಕೆಂಡರಿ ಶಾಲೆಯು ವಿಜ್ಞಾನ ವಿಭಾಗದಲ್ಲಿ 93.22 ಶೇ. ಹಾಗೂ ಕಾಮರ್ಸ್ ವಿಭಾಗದಲ್ಲಿ 57.63 ಶೇ. ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸುದರ್ಶನ ಕೆ, ವರದರಾಜ್ ಕೆ ಆರ್, ಮಹೇಶ್ವರ ಕೆ ಎಸ್, ಅನೀಶ್ ಕೃಷ್ಣ ಕೆ, ಶ್ರೀ ಗೌರಿ ಜಿ ಎ, ಅದ್ವೈತ ಎಂ.ಎಸ್, ಹನನ್ ಎಂ, ಶಿವಾನಿ ಎಂ, ನಿಖಿತ ಯು.ಕೆ, ತ್ವಿಷಾ ರೈ, ಜತನ್ ಸಿ.ವಿ, ಸಂಜನಾ ಎಸ್ ರಾಜ್, ಸಾನಿಧ್ಯ ರೈ, ಶ್ರೇಯಾ ಈ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ ಗ್ರೇಡ್ ಪಡೆದು ಉತ್ತಮ ಸಾಧನೆ ಮಾಡಿರುವರು. ವಿಜೇತ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಅಧ್ಯಾಪಕ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.





