ಮುಳ್ಳೇರಿಯ: ಮವ್ವಾರು ಶ್ರೀ ಗಣೇಶ ಸೇವಾ ಟ್ರಸ್ಟ್ ಇದರ ಮಹಾಸಭೆಯು ಭಾನುವಾರ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎರಡನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಭೆಯಲ್ಲಿ ಮವ್ವಾರು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವೇಣುಗೋಪಾಲ ಕಳೆಯತ್ತೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೀಪ ಪ್ರಜ್ವಲನೆಯನ್ನು ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ಹಾಗೂ ಹಿರಿಯ ಧಾರ್ಮಿಕ ಮುಂದಾಳು ಸಂಜೀವ ಶೆಟ್ಟಿ ಮೊಟ್ಟೆಕುಂಜೆ ಜೊತೆಯಾಗಿ ನಿರ್ವಹಿಸಿದರು. ಆರ್‍ಎಸ್‍ಎಸ್ ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕೆಕೆಪುರಂ ಪ್ರಧಾನ ಭಾಷಣ ಮಾಡಿದರು.
ಆರಂಭದಲ್ಲಿ ಗಂಗಾಧರ ರೈ ಮಠದ ಮೂಲೆ ಸ್ವಾಗತಿಸಿ, ಕೃಷ್ಣ ಮಣಿಯಾಣಿ ಅಗಲ್ಪಾಡಿ ವಂದಿಸಿದರು. ರಮೇಶ್ ಕೃಷ್ಣ ಪದ್ಮಾರ್ ಕಾರ್ಯಕ್ರಮ ನಿರೂಪಿಸಿದರು. ಲಾವಣ್ಯಗಿರೀಶ್ ಪ್ರಾರ್ಥನೆ ಹಾಡಿದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ ರಾಮಚಂದ್ರ ಮಾರ್ಪನಡ್ಕ, ಉಪಾಧ್ಯಕ್ಷರಾಗಿ ಯೋಗೀಶ ಪೆÇಡಿಪಳ್ಳ, ಸಂತೋಷ್ ಕುಮಾರ್, ಸೀತಾರಾಮ ಭಟ್, ರಾಜೇಶ್ ಶೆಟ್ಟಿ ಬಲೆಕ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಗೋಸಾಡ, ಕಾರ್ಯದರ್ಶಿಗಳಾಗಿ ಶ್ರೀಧರ ಪದ್ಮಾರ್, ಸಿಂಧು ವಡಂಬಳೆ, ಸದಾಶಿವ ರೈ ಮಾಚವ್, ಲತಾ ಆನೆಪಳ್ಳ, ಕೋಶಾಧಿಕಾರಿಯಾಗಿ ಗೋಪಾಲಕೃಷ್ಣ ಭಟ್ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ 23 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.





