ಕಾಸರಗೋಡು: 25ನೇ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ ಕಾಸರಗೋಡು ನಗರಸಭಾಂಗಣದಲ್ಲಿ ನಡೆಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಐಎಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಸಹಾಯಕ ವೈದ್ಯಾಧಿಕಾರಿ ಡಾ. ಸಂತೋಷ್ ಬಿ ಅವರು ದಾದಿಯರ ದಿನಾಚರಣೆಯ ಸಂದೇಶ ನೀಡಿದರು.
ನಗರಸಭಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್, ಜಿಲ್ಲಾ ಆಸ್ಪತ್ರೆ ಅದಿಕ್ಷಕಿ ಡಾ. ಜೀಜಾ ಎಂ.ಪಿ, ಜನರಲ್ ಆಸ್ಪತ್ರೆಯ ಪ್ರಭಾರ ಸೂಪರಿಂಟೆಂಡೆಂಟ್ ಡಾ. ಜನಾರ್ದನ ನಾಯ್ಕ್, ಕಾಞಂಗಾಡು ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಜಯಪ್ರಕಾಶ್ ಸಿ.ಪಿ, ಕಾಸರಗೊಡು ಜೆಪಿಎಚ್‍ಎನ್ ತರಬೇತಿ ಶಾಲೆ ಪ್ರಾಂಶುಪಾಲೆ ಟಿ.ಜಿ. ಮೋಳ್ ಎನ್. ಥಾಮಸ್, ಕೇರ್‍ವೆಲ್ ಸ್ಕೂಲ್ ಆಫ್ ನರ್ಸಿಂಗ್‍ನ ಪ್ರಧಾನ ನರ್ಸಿಂಗ್ ಅಧಿಕಾರಿ ಅಲೆಕ್ಸ್.ಕೆ. ಜಾರ್ಜ್, ಜನರಲ್ ಆಸ್ಪತ್ರೆ ನರ್ಸಿಂಗ್ ಮೇಲ್ವಿಚಾರಕಿ ಎ. ಲತಾ, ಜಿಲ್ಲಾಸ್ಪತ್ರೆ ನರ್ಸಿಂಗ್ ಮೇಲ್ವಿಚಾರಕಿ ಟಿ.ವಿ. ಸ್ನೇಹಲತಾ, ಪೆರಿಯಾ ಪಿಎಚ್‍ಸಿಯ ಒ.ಟಿ. ಸಲ್ಮತ್, ಪಿ.ವಿ. ಪವಿತ್ರನ್, ಜೋಬಿ ಜಾರ್ಜ್, ಎನ್. ನಂದನ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ನಸಿರ್ಂಗ್ ಸೂಪರಿಂಟೆಂಡೆಂಟ್ ಮಿನಿ ಜೋಸೆಫ್ ಸ್ವಾಗತಿಸಿದರು, ಶೋಭನಾ ಎಂ ವಂದಿಸಿದರು.
ಈ ಸಂದರ್ಭ ಸೇವೆಯಿಂದ ನಿವೃತ್ತರಾದ ಸಿಬ್ಬಂದಿಯನ್ನು ಗೌರವಿಸಲಾಯಿತು. ಸ್ಪಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಸಿರ್ಂಗ್ ವಿದ್ಯಾರ್ಥಿಗಳು ಮತ್ತು ದಾದಿಯರಿಂದ ವಿವಿಧ ಕಲಾ ಪ್ರದರ್ಶನ ಆಯೋಜಿಸಲಾಗಿತ್ತು.






