ಉಪ್ಪಳ: ನಮ್ಮ ಹಿಂದೂರಾಷ್ಟ್ರದ ಮುಕುಟ ಮಣಿ ಕಾಶ್ಮೀರ. ಅದರ ಮೇಲಾಗುತ್ತಿರುವ ದಾಳಿ ಕಳವಳಕಾರಿ. ಧರ್ಮವನ್ನು ವಿಚಾರಿಸಿ ನಡೆಸಿರುವ ಪಹಲ್ಗಾಂ ಹತ್ಯಾಕಾಂಡ ಕಳವಳಕಾರಿ. ಈ ಪರಿಸ್ಥಿತಿ ನಮ್ಮೂರಿಗೂ ಕಾಲಿರಿಸುವ ಸಾಧ್ಯತೆಯಿದೆ. ಸಮಾಜ ಜಾಗೃತವಾಗಬೇಕಿದೆ ಎಂದು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಕರೆ ನೀಡಿದರು.
ಪಹಲ್ಗಾಂ ದಾಳಿ ಖಂಡಿಸಿ 'ಧರ್ಮದ ಉದ್ಧಾರಕ್ಕಾಗಿ, ಅಧರ್ಮದ ಅಂತ್ಯಕ್ಕಾಗಿ' ಎಡನೀರು ಶ್ರೀಶಂಕರಾಚಾರ್ಯ ಮಹಾಸಂಸ್ಥಾನ ಹಾಗೂ ಕೊಂಡೆವೂರು ನಿತ್ಯಾನಂದ ಯೋಗಾಶ್ರಮ ಜಂಟಿಯಾಗಿ ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗ ಭಾನುವಾರ ಸಂಜೆ ಉಪ್ಪಳ ಐಲ ಮ್ಯೆದಾನದಲ್ಲಿ ಆಯೋಜಿಸಿದ ಹುತಾತ್ಮರಿಗೆ ನಮನ ಹಾಗೂ ವಿರಾಟ್ ಹಿಂದೂ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜವು ಜಾತಿ, ಮೇಲುಕೀಳು ಮರೆತು ಒಂದಾಗಬೇಕು. ದುಷ್ಟರ ನಿಗ್ರಹಕ್ಕೆ ಜಗಜ್ಜನನಿ ನಿಗ್ರಹಿಸಿದ ಆ ಶಕ್ತಿ ನಮ್ಮಲ್ಲಿರಲಿ. ಪ್ರತೊಯೊಬ್ಬನೂ ಜಾಗೃತನಾದಾಗ ಧರ್ಮದ ಮೇಲಾಗುವ ದಾಳಿಗಳಿಗೆ ತಕ್ಕ ಉತ್ತರ ಕೊಡಲು ಸಾಧ್ಯ. ದಾಳಿಯಲ್ಲಿ ಮೃತಪಟ್ಟವರಿಗೆ ಭಾಷ್ಪಾಂಜಲಿ ರೂಪದಲ್ಲಿ ಸುರಿಸು ಕಣ್ಣೀರ ಧಾರೆ ದೇಶಭಕ್ತಿಯಿಂದೊಡಗೂಡಿ ಜಾಗೃತ ಶಕ್ತಿಯಾಗಿ ಶಿವನ ಮೂರನೇ ಕಣ್ಣಿಂದ ಹೊರಟ ಧಮನಕಾರಿ ಅಗ್ನಿಪುಂಜವಾಗಿ ನಾಶಗೊಳಿಸಬೇಕು ಎಂದು ಕರೆನೀಡಿದರು.
ಕೇರಳ ಚಿನ್ಮಯ ಮಿಷನ್ ಪ್ರಾಂತ ಪ್ರಮುಖರೂ, ಕಾಸರಗೋಡು ಚಿನ್ಮಯ ಮಿಷನ್ ನ ಶ್ರೀವಿವಿಕ್ತಾನಂದ ಸರಸ್ವತಿ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರಿನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಖಂಡಿಸಿ ಮಾತನಾಡಿದರು.
ಹಿರಿಯ ಧಾರ್ಮಿಕ,ಸಾಮಾಜಿಕ ಮುಂದಾಳು ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ಧ ಸಮಾರಂಭದಲ್ಲಿ ಯುವ ವಾಗ್ಮಿ, ಸಂಘಟಕ, ವಿ.ಹಿಂ.ಪ. ಕೇರಳ- ತಮಿಳುನಾಡುಸಂಘಟಕ ಜಿಜೇಶ್ ಪಟ್ಟೇರಿ ಅವರು ಮಲೆಯಾಳಂನಲ್ಲಿ ಮುಖ್ಯ ಭಾಷಣ ಮಾಡಿದರು.
ಮ್ಯೆಸೂರು ರಂಗಾಯಣದ ನಿಕಟಪೂರ್ವ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕನ್ನಡದಲ್ಲಿ ಪ್ರಧಾನ ಭಾಷಣಗ್ಯೆದು, ಸತತ ದಾಳಿಗಳ ಹೊರತಾಗಿಯೂ ಸೆಟೆದು ನಿಂತಿರುವುದು ಸನಾತನ ಧರ್ಮ ಪರಂಪರೆಯ ಶಕ್ತಿ. ಕಾಶ್ಮೀರ ಪಂಡಿತರ ಕಣ್ಣೀರಿಗೆ ಅಂತಿಮ ಉತ್ತರ ಕೊಡುವ ಕಾಲ ಸನ್ನಿಹಿತವಾಗಿದೆ. ಹಿಂದೂ ಸಮಾಜ ಕಾಲಾಕಾಲಕ್ಕೆ ಮೌಢ್ಯಗಳನ್ನು ನಿವಾರಿಸಿ ಸಮೃದ್ದಗೊಂಡಿದೆ. ಆದರೆ ಮತಾಂಧ ಸಮುದಾಯ ಅಪ್ರಸ್ತುತ ಪುಸ್ತಕಹಿಡಿದು ಅದರಲ್ಲಿರುವ ಅಪ್ರಬುದ್ಧ ಹೇಳಿಕೆಗಳನ್ನು ಜಾರಿಗೆ ತರುತ್ತಿರುವುದು ಮೂಢತ್ವದ ಪರಮಾವಧಿ. ರಾಷ್ಟ್ರದ ಚುಕ್ಕಾಣಿ ಹಿಡಿರುವ ಇಂದಿನ ನಾಯಕರು ಆರ್.ಎಸ್.ಎಸ್.ನ ಗರಡಿಯಲ್ಲಿ ಪಳಗಿದ ದೇಶ ಪ್ರೇಮಿಗಳು ಆಳುತ್ತಿರುವ ಸಂದರ್ಭ ಈ ಹಿಂದಾದ ಹುಂಬತನದ ಆವರ್ತನೆಯಾಗು. ದುರುಳರ ವಿರುದ್ದ ತಕ್ಕ ಶಾಸ್ತಿಯಾಗುವುದು. ಹಿಂದೂಗಳು ಒಗ್ಗಟ್ಟಾಗಿ ಎದುರಾಗುವ ಅಸಾಮಾನ್ಯತೆಗಳಿಗೆದುರಾಗಿ ಜಾತಿ, ವಿಭಾಗಳನ್ನು ಮರೆತು ಒಂದಾಗೋಣ, ಜೊತೆಗೆ ದುರುಳರ ವಿರುದ್ದ ಟೊಂಕ ಕಟ್ಟೋಣ ಎಂದು ಕರೆ ನೀಡಿದರು.
ಇತಿಹಾಸದ ಹೆಜ್ಜೆ ಹೆಜ್ಜೆಯಲ್ಲಿ ಮೊಗಲರ ಆಕ್ರಮಣದಿಂದ ಭಾರತ ಬಸವಳಿದು, ತತ್ತರಿಸಿದೆ. ನಾವು ಶಾಂತಿ ಸಾಮರಸ್ಯ ಹೇಳುತ್ತಲೇ ಘಟಿಸಿದ್ದನ್ನು ಮರೆಯುತ್ತೇವೆ. ಈಗಲೂ ಅದೇ ಪುನರಾವರ್ತನೆಯಾಗುತ್ತಿರುವುದು ದುರ್ದೈವ. 26 ಮಂದಿ ಹಿಂದೂಗಳನ್ನು ಯಾವ ಮಮಕಾರವೂ ಇಲ್ಲದೇ ಇಸ್ಲಾಮಿಕ್ ಉಗ್ರರು ಹಿಂದೂ ಎಂಬ ಕಾರಣಕ್ಕೆ ಕೊಂದಿದ್ದಾರೆ. ಆದರೆ ನಮ್ಮಲ್ಲಿನ ಭಾರತೀಯ ಮುಸಲ್ಮಾನರು ಇದನ್ನು ಬಹಿರಂಗ ಖಂಡಿಸಿದರೇ? ಪ್ರತಿಭಟಿಸಿದರೇ? ನೊಂದರೇ? ನಾವೂ ಒಂದೆರಡು ತಿಂಗಳಲ್ಲಿ ಘಟಿಸಿದ್ದನ್ನು ಮರೆತು ಬಿಡುತ್ತೇವೆ. ನಾವು ಬಂಟ, ಬಿಲ್ಲವ, ಬ್ರಾಹ್ಮಣ ಎಂದು ಜಾತಿ ಜಗಳಾಡುತ್ತಲೇ ಇರುತ್ತೇವೆ. ಅಷ್ಟರಲ್ಲೇ ಚುನಾವಣೆ ಬರುತ್ತದೆ, ಆಗ ನಮ್ಮ ಜಗಳದ ನಡುವೆ ಘಜನಿ ಸಂತಾನದ ಮೊಮ್ಮಗ ನಮ್ಮಲ್ಲಿಂದ ಅನಾಯಾಸ ಗೆದ್ದು ಬೀಗುತ್ತಾನೆ. ನಮ್ಮನ್ನಾಳುವ ಸೂತ್ರ ಅವನದ್ದಾಗುತ್ತದೆ. ಹಿಂದೂಗಳೆನಿಸಿಕೊಂಡವರಿಗೆ ಇದಕ್ಕಿಂತ ದೊಡ್ಡ ನಾಚಿಕೆ ಏನಿದೆ ಎಂದು ಪ್ರಶ್ನಿಸಿ ಅಡ್ಡಂಡ ಕಾರ್ಯಪ್ಪ ಗುಡುಗಿದರು.
ಎಡನೀರು ಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಪದ್ಮಾ ಮೋಹನದಾಸ್ ಉಪ್ಪಳ ವಂದಿಸಿದರು. ಶ್ರೀಧರ ಶೆಟ್ಟಿ ಪರಂಕಿಲ ಹಾಗೂ ಕಮಲಾಕ್ಷ ಐಲ ನಿರೂಪಿಸಿದರು. ಸಮಾರಂಭದ ಮೊದಲು ಎಡನಿರು ಶ್ರೀಗಳು ಭಾರತ ಮಾತೆಯ ಭಾವಚಿತ್ರದೆದುರು ದೀಪ ಬೆಳಗಿ ಚಾಲನೆ ನೀಡಿದರು. ಬೆಳಿಗ್ಗೆ ಐಲ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ರಾಷ್ಟ್ರರಕ್ಷಣೆಗೆ ವಿಶೇಷ ಪ್ರಾರ್ಥನೆ ನಡೆಯಿತು. ಜಿಲ್ಲೆಯ ಉದ್ದಗಲದಿಂದ 5 ಸಾವಿರಕ್ಕಿಂತ ಮಿಕ್ಕಿದ ಜನರು ಪಾಲ್ಗೊಂಡಿದ್ದರು. ಜೊತೆಗೆ ಬಿಜೆಪಿ, ಸಂಘಪರಿವಾರದ ಪ್ರಮುಖ ನಾಯಕರೂ ಉಪಸ್ಥಿತರಿದ್ದರು.



.jpg)
