ಜೆರುಸಲೇಂ: ಹಮಾಸ್ ಬಂಡುಕೋರರೊಂದಿಗಿನ ಯುದ್ಧಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಿಸುವ ಅಮೆರಿಕ ಶಿಫಾರಸಿಗೆ ಇಸ್ರೇಲ್ ಒಪ್ಪಿಗೆ ನೀಡಿದೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.
ಶ್ವೇತಭವನದ ಮಾದ್ಯಮ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು, 'ನೂತನ ಶಿಫಾರಸಿಗೆ ಇಸ್ರೇಲ್ ಒಪ್ಪಿಗೆ ನೀಡಿದೆ ಮತ್ತು ಅದನ್ನು ಬೆಂಬಲಿಸಿದೆ' ಎಂದು ತಿಳಿಸಿದರು.
ಇಸ್ರೇಲ್ ಒಪ್ಪಿಗೆ ನೀಡಿರುವ ಶಿಫಾರಸಿಗೆ ಹಮಾಸ್ ಅಧಿಕಾರಿಗಳು ತಣ್ಣನೆಯ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡುವ ಮುನ್ನ ಶಿಫಾರಸನ್ನು ಮತ್ತಷ್ಟು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಹಮಾಸ್ ತನ್ನ ಬಳಿ ಇರಿಸಿಕೊಂಡಿರುವ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು. ಗಾಜಾವನ್ನು ಅನಿರ್ದಿಷ್ಟಾವಧಿಗೆ ಇಸ್ರೇಲ್ ನಿಯಂತ್ರಣದಲ್ಲಿ ಇಟ್ಟುಕೊಳ್ಳಲಿದೆ ಎಂದೂ ಹೇಳಿದ್ದರು.




